ಪುತ್ತೂರು: ಮೂಲಾ ನಕ್ಷತ್ರದಲ್ಲಿ ಸರಸ್ವತಿಯನ್ನು ಪೂಜಿಸಬೇಕು. ಯಜ್ಞ, ಪೂಜೆ, ಭಜನೆ ಮುಖೇನ ದೇವಿಯ ಆರಾಧನೆ, ಇದರಿಂದ ದುಷ್ಟ ಶಕ್ತಿಯ ನಿರ್ಮೂಲನೆಯಾಗುವುದು. ಹೋಮಧೂಮದಿಂದ ಉತ್ತಮ ಆರೋಗ್ಯ, ಪರಿಸರ ಸಂರಕ್ಷಣೆ ಸಾಧ್ಯ. ಹಿಂದೆ ದೇವಿ ನಾನಾ ರೂಪದಿಂದ ಭಯೋತ್ಪಾದಕ ರಾಕ್ಷಸರನ್ನು ಸಂಹರಿಸಿ ಲೋಕೋದ್ಧಾರ ಮಾಡಿದ ಸವಿ ನೆನಪಿನ ಆಚರಣೆ ನವರಾತ್ರಿ; ನಾವು ಇದನ್ನು ಆಚರಿಸಿ ಮುಂದಿನ ತಲೆಮಾರಿಗೂ ತಿಳಿಸಬೇಕಾಗಿದೆ. ಅರಿಷಡ್ವರ್ಗಗಳನ್ನು ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವನ್ನು ನಿಯಂತ್ರಿಸುವುದನ್ನು ದೇವಿ ಕಲಿಸುತ್ತಾಳೆ. ಇದು ನವರಾತ್ರಿಯ ಸಂದೇಶ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಡೆದ ಶಾರದಾ ಪೂಜೆಯಲ್ಲಿ ಅಂಬಿಕಾ ಪದವಿ ವಿದ್ಯಾಲಯದ ಪ್ರಾಚಾರ್ಯ, ವಾಗ್ಮಿ, ಚಿಂತಕ ಡಾ. ವಿನಾಯಕ ಭಟ್ ಗಾಳಿಮನೆ ನವರಾತ್ರಿಯ ಮಹತ್ವವನ್ನು ತಿಳಿಸಿದರು.
ಓಝೋನ್ ಪದರಕ್ಕೆ ಪರಿಸರ ಮಾಲಿನ್ಯದಿಂದಾಗಿ ಆಗುವ ಹಾನಿ, ಹೋಮ ಧೂಮದಿಂದಾಗುವ ಲಾಭ ಇದನ್ನು ವೈಜ್ಞಾನಿಕ ಕಾರಣದಿಂದ ಸಮರ್ಥಿಸಿ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜರು ನವರಾತ್ರಿ ಪೂಜೆಯ ಶುಭ ಸಂದೇಶವಿತ್ತರು.
ಬ್ರಹ್ಮಶ್ರೀ ಜಗದೀಶ ಭಟ್ಟರು ಪೂಜಾಕಾರ್ಯಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ಶಾರದಾ ಭಜನೆ ನಡೆಯಿತು. ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಮತ್ತು ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ರಾಜಶ್ರೀ ನಟ್ಟೋಜ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಾಜೆ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅನನ್ಯಾ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment