ಬೆಂಗಳೂರು ; ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು.
ಈ ಮೊದಲು ಅವರಿಗೆ ಜಾಂಡೀಸ್ ಆಗಿತ್ತು. ಇದರ ಜೊತೆಗೆ ಸತ್ಯಜೀತ್ ಅವರಿಗೆ ಹಾರ್ಟ್ ಸ್ಟ್ರೋಕ್ ಆಗಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
650 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ಇವರು ಹೆಚ್ಚಾಗಿ ನೆಗೆಟಿವ್ ರೋಲ್ ಗಳಲ್ಲಿಯೇ ಸತ್ಯಜಿತ್ ಬಣ್ಣ ಹಚ್ಚಿದ್ದಾರೆ.
ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಅನಾರೋಗ್ಯದ ಕಾರಣ 72 ವರ್ಷದ ಸತ್ಯಜಿತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದ್ದು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅತ್ಯಜಿತ್ ಪುತ್ರ ಹೇಳಿದ್ದಾರೆ.
ಈಗಾಗಲೇ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ (ICU) ಸತ್ಯಜೀತ್ ಅವರಿಗೆ ಕೊಡಲಾಗುತ್ತಿದ್ದು, ರಕ್ತದೊತ್ತಡ, ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತಿದ್ದು, ಸರಿಯಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.
Post a Comment