ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಣರಾಜ್ಯೋತ್ಸವ ಸಿದ್ಧತಾ ಶಿಬಿರಕ್ಕೆ ಎಸ್‌ಡಿಎಂ ವಿದ್ಯಾರ್ಥಿ ಆಯ್ಕೆ

ಗಣರಾಜ್ಯೋತ್ಸವ ಸಿದ್ಧತಾ ಶಿಬಿರಕ್ಕೆ ಎಸ್‌ಡಿಎಂ ವಿದ್ಯಾರ್ಥಿ ಆಯ್ಕೆ




ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕ, ಮೊದಲ ಬಿ.ಎಸ್.ಸಿ ವಿದ್ಯಾರ್ಥಿ ಹೃತಿಕ್‌ ಅವರು ದಕ್ಷಿಣ ವಲಯ ಮಟ್ಟದ ಗಣರಾಜ್ಯೋತ್ಸವದ ಪರೇಡ್‌ಗಾಗಿ ನಡೆಯಲಿರುವ ಪೂರ್ವಸಿದ್ಧತಾ ಆಯ್ಕೆ ಶಿಬಿರಕ್ಕೆ ಅರ್ಹತೆ ಪಡೆದಿದ್ದಾರೆ.


ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಗಣರಾಜ್ಯೋತ್ಸವದ ಪರೇಡ್‌ ಪೂರ್ವಸಿದ್ಧತಾ ಆಯ್ಕೆ ಶಿಬಿರದಲ್ಲಿ ಮೊದಲ ಸ್ಥಾನದೊಂದಿಗೆ ದಕ್ಷಿಣ ವಲಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.


ಇದಕ್ಕೂ ಮುಂಚೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆಯ್ಕೆ ಶಿಬಿರದಲ್ಲೂ ಮೊದಲ ಸ್ಥಾನದ ಪ್ರಾಶಸ್ತ್ಯದ ಮೂಲಕ ಹೃತಿಕ್‌ ವೈಶಿಷ್ಟ್ಯತೆ ಮೆರೆದಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post