ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಡು ಹಂದಿಗೆ ಡಿಕ್ಕಿ: ಸ್ಕೂಟರ್ ಪಲ್ಟಿಯಾಗಿ ಸವಾರ ಸಾವು

ಕಾಡು ಹಂದಿಗೆ ಡಿಕ್ಕಿ: ಸ್ಕೂಟರ್ ಪಲ್ಟಿಯಾಗಿ ಸವಾರ ಸಾವು



ಕಾಸರಗೋಡು : ರಸ್ತೆ ಅಡ್ಡವಾಗಿ ಬಂದ ಕಾಡಹಂದಿಗೆ ಬಡಿದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ಘಟನೆಯೊಂದು ಶುಕ್ರವಾರ ಮುಳ್ಳೇರಿಯ ಸಮೀಪದ ಕರ್ಮಂತ್ತೋಡಿಯಲ್ಲಿ ನಡೆದಿದೆ.


ಕರ್ಮತ್ತೋಡಿ ಕಾವುಂಗಾಲ್ ನ ಕುಞಂಬು ನಾಯರ್ ( 60) ಮೃತಪಟ್ಟವರು.


ಬೆಳಿಗ್ಗೆ ಮುಳ್ಳೇರಿಯ ಪೇಟೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕರ್ಮಂತ್ತೋಡಿಯಲ್ಲಿ ಕಾಡುಹಂದಿಯು ರಸ್ತೆಗಡ್ಡವಾಗಿ ಓಡಿದ್ದು , ಸ್ಕೂಟರ್ ಹಂದಿಗೆ ಬಡಿದಿದೆ. 


ನಿಯಂತ್ರಣ ಕಳೆದುಕೊಂಡ ಸವಾರ ಸ್ಕೂಟರ್ ಮಗುಚಿ ಬಿದ್ದಿದ್ದು ,ರಸ್ತೆಗೆಸೆಯಲ್ಪಟ್ಟ ಕುಞಂಬು ನಾಯರ್ ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಮುಳ್ಳೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಮೃತಪಟ್ಟರು.

ಸ್ಕೂಟರ್ ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕಾಡ ಹಂದಿ ಕೂಡಾ ಸ್ಥಳದಲ್ಲೇ ಮೃತಪಟ್ಟಿದೆ.


ಘಟನಾ ಸ್ಥಳಕ್ಕೆ ಅರಣ್ಯ ಪಾಲಕರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم