ಉಜಿರೆ: ಪೊಲೀಸ್ ಇಲಾಖೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4230 ಪಿ.ಸಿ. (ಪೊಲೀಸ್ ಕಾನ್‍ಸ್ಟೇಬಲ್)ಗಳ ಆಯ್ಕೆಗಾಗಿ ಉಜಿರೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಆರು ಕೇಂದ್ರಗಳಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಯಿಂದ 1.30ರ ವರೆಗೆ ಲಿಖಿತ ಪರೀಕ್ಷೆ ನಡೆಯುತ್ತದೆ.
ಪರೀಕ್ಷಾ ವ್ಯವಸ್ಥೆ ಬಗ್ಯೆ ಶನಿವಾರ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಸ್ ಸೋನವನೆ ನೇತೃತ್ವದಲ್ಲಿ ಕೊಠಡಿ ಮೇಲ್ವಿಚಾರಕರಿಗೆ ಪೂರ್ವಸಿದ್ಧತಾ ತರಬೇತಿ ನೀಡಲಾಯಿತು.
ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಿದರು. ಇಪ್ಪತ್ತು ಅಭ್ಯರ್ಥಿಗಳಿಗೆ ಒಬ್ಬರಂತೆ 216 ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಸುಗಮವಾಗಿ ನಡೆಸಲು ಆರು ಕೇಂದ್ರಗಳನ್ನು ಪೋಲಿಸ್ ಇಲಾಖೆಗೆ ಬಿಟ್ಟು ಕೊಡಲಾಗಿದೆ.
ಎ.ಎಸ್.ಪಿ. ಶಿವಾಂಶ ರಜಪೂತ್, ಡಿ.ವೈ.ಎಸ್.ಪಿ. ಗಾನ, ಪಿ. ಕುಮಾರ್ ಮತ್ತು ಪ್ರಾಂಶುಪಾಲರುಗಳಾದ ಪ್ರೊ. ದಿನೇಶ್ ಚೌಟ ಮತ್ತು ಡಾ. ಪ್ರಶಾಂತ್ ಶೆಟ್ಟಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment