ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡೆತ್ ನೋಟ್ ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

 



ಮಂಗಳೂರು : ಇಲ್ಲಿನ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದು, ಕಾಲೇಜು ಫೀಸ್ ಕಟ್ಟುವ  ವಿಚಾರದಲ್ಲಿ ಮನ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.


ಮಳೆಯಾಲಂ ಭಾಷೆ ಯಲ್ಲಿ ಡೆತ್‌ನೋಟ್‌ನಲ್ಲಿ ಇನ್ಯಾವತ್ತಿಗೂ ತಾಯಿಗೆ ಭಾರ ಆಗಿರಲ್ಲ ಅಂತಾ ಹೇಳಿ ಇನ್ನೊಂದು ಬಾರದ ಲೋಕಕ್ಕೆ ತೆರಳಿದ್ದಾಳೆ. 


ಹುಡುಗಿಯ ಹೆಸರು ನೀನಾ ಸತೀಶ್. ಈಕೆ ಮೂಲತಃ ಕೇರಳದ ಕಾಸರಗೋಡು ಮೂಲದ ವಿದ್ಯಾರ್ಥಿನಿ. ಮಂಗಳೂರು ನಗರದ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ನಿನ್ನೆ ಆಕೆ ವಾಸ್ತವ್ಯವಿದ್ದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. 


ಬಾತ್‌ರೂಮ್‌ನಲ್ಲಿ ನಳ್ಳಿ ನೀರು ಬಿಟ್ಟು ಕಿಟಕಿಗೆ ನೇಣುಬಿಗಿದುಕೊಂಡಿದ್ದು, ಇದನ್ನು ಗಮನಿಸಿದ ರೂಮ್‌ಮೇಟ್‌ಗಳು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. 


ಆದರೆ ನೀನಾ ಸತೀಶ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ.


ಕದ್ರಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ನೀನಾ ಸತೀಶ್ ಪೋಷಕರು, ಸಹಪಾಠಿಗಳು, ಕಾಲೇಜು ಆಡಳಿತ ಮಂಡಳಿಯವರನ್ನು ವಿಚಾರಣೆ ನಡೆಸಿದ್ದಾರೆ. 


0 تعليقات

إرسال تعليق

Post a Comment (0)

أحدث أقدم