ಪುತ್ತೂರು: ಪ್ರತಿಯೊಂದು ಬಿಲ್ಡಿಂಗ್ ಕಟ್ಟುವಾಗಲೂ ತನ್ನದೇ ಆದಂತಹ ವಿಶೇಷತೆಯನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಈ ಕೋಚಿಂಗ್ ತರಗತಿಯ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಮುನ್ನಡೆಯಿರಿ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಓಂಖಿಂ ಕೋಚಿಂಗ್ ತರಗತಿಯನ್ನು ಉದ್ಘಾಟಿಸಿ ಅಂಬಿಕಾದ ಹಿರಿಯ ವಿದ್ಯಾರ್ಥಿ ಪುತ್ತೂರಿನಲ್ಲಿ ಪರಿಕಲ್ಪನಾ ಆರ್ಕಿಟೆಕ್ಚರ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ರಾಮ್‍ಪ್ರಕಾಶ್ ಮಾತನಾಡಿದರು; ಹಾಗೂ ವಿಧ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಕಟ್ಟಡ ವಿನ್ಯಾಸದಲ್ಲಿ ಹೊಸತನ್ನು ಸಾಧಿಸಿ ಯಶಸ್ವಿಯಾಗಿ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ನುಡಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ರಾಜಶ್ರೀ ಎಸ್ ನಟ್ಟೋಜ, ಓಂಖಿಂ ತರಗತಿ ನಡೆಸುವ ಸುನಿಲ್ ಅಬ್ರಹಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದನಾರ್ಪಣೆಗೈದರು. ಉಪನ್ಯಾಸಕ ಆದಿತ್ಯ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿ ಶನಿವಾರ ಅಪರಾಹ್ನ 2 ರಿಂದ 5 ಗಂಟೆಯವರೆಗೆ NATA ಕೋಚಿಂಗ್ ತರಗತಿಗಳು ನಡೆಯುತ್ತವೆ. ಈ ತರಗತಿಗಳನ್ನು ಸೇರಬಯಸುವ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9741481600
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment