ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರ ವೀಕ್ಷಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಕಂಗೊಳಿಸುವ ಸಾಂಸ್ಕೃತಿಕ ನಗರಿಯಲ್ಲಿ ವಿದ್ಯುತ್ ದೀಪಾಲಂಕಾರ ವೀಕ್ಷಣೆ ಅವಧಿಯನ್ನು ರಾತ್ರಿ 10.30 ರವರೆಗೆ ವಿದ್ಯುತ್ ದೀಪಾಲಂಕಾರ ನೋಡಲು ಅವಕಾಶ ಮಾಡಿಕೊಟ್ಟಿದೆ.
ಜಂಬೂ ಸವಾರಿ ದಿನ ರಾತ್ರಿ 11 ರವರೆಗೆ ವಿದ್ಯುತ್ ದೀಪಾಲಂಕಾರ ವೀಕ್ಷಣೆ ಅವಧಿ ವಿಸ್ತರಿಸಿರುವುದಾಗಿ ಚೆಸ್ಕಾಂ ಎಂಡಿ ಜಯವಿಭವಸ್ವಾಮಿ ಆದೇಶ ಹೊರಡಿಸಿದ್ದಾರೆ.
ಈ ಮೊದಲು ದಸರಾ ದೀಪಾಲಂಕಾರ ಅವಧಿಯನ್ನು ಸಂಜೆ 6 ರಿಂದ 10 ರವೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಇದೀಗ ದೀಪಾಲಂಕಾರ ವೀಕ್ಷಣೆ ಅವಧಿಯನ್ನು ಇನ್ನೂ ಅರ್ಧ ಗಂಟೆ ಕಾಲ ವಿಸ್ತರಿಸಲಾಗಿದೆ.
Post a Comment