ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ; ಕಾಣೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ

ಮಂಗಳೂರು ; ಕಾಣೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ

 


ಮಂಗಳೂರು; ರವಿವಾರ ಬೆಳಗ್ಗೆ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದ 11 ವರ್ಷ ಪ್ರಾಯದ ಬಾಲಕಿಯ ಮೃತದೇಹವು ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ.

ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ (11 ವರ್ಷ) ಮೃತಪಟ್ಟ ಬಾಲಕಿ. ಈಕೆ ರವಿವಾರ ಬೆಳಗ್ಗೆ ಸುಮಾರು ಗಂಟೆ ಮನೆಯಿಂದ ದಿಢೀರ್ ಕಾಣೆಯಾಗಿದ್ದಳು. ಎಲ್ಲಾ ಕಡೆ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.

ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀ. ದೂರದಲ್ಲಿರುವ ನದಿ ಕಡೆಗೆ ಬಾಲಕಿ ಮುಫೀದಾ ತೆರಳುತ್ತಿರುವುದು ಕಂಡುಬಂತು. ಹಾಗೆ ಸ್ಥಳೀಯರು ಕುದ್ರೋಳಿಯ ಕಾರ್ಖಾನೆ ಬಳಿಯ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಮುಫೀದಾಳ ಮೃತದೇಹ ಪತ್ತೆಯಾಗಿದೆ.

ಈ ಹುಡುಗಿ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments

Post a Comment

Post a Comment (0)

Previous Post Next Post