ಮಂಜೇಶ್ವರ: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆ ಹಾಗೂ ಎಸ್ಎಟಿ ಶಾಲಾ ಘಟಕದ ಜಂಟಿ ಆಶ್ರಯದಲ್ಲಿ ಮಗುವಿಗೊಂದು ಲೈಬ್ರರಿ ಕಾರ್ಯಕ್ರಮವು ಮಂಜೇಶ್ವರ ಪರಿಸರದ ಮಾಡದಲ್ಲಿ ಜರಗಿತು.
ಮಂಜೇಶ್ವರ ಮಾಡ ಪರಿಸರದ ಶ್ರೀಯುತ ರಾಘವನ್ ಅವರ ನಿವಾಸದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಟಿ ಶಾಲಾ ಸಂಚಾಲಕರಾದ ಶ್ರೀ ಕೃಷ್ಣ ಭಟ್ ವಹಿಸಿದ್ದರು. ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ ಮಗುವಿಗೊಂದು ಲೈಬ್ರೆರಿಯ ಮಹತ್ವವನ್ನು ತಿಳಿಸಿ ಶುಭಹಾರೈಸಿದರು.
ಕಾಸರಗೋಡು ಜಿಲ್ಲಾ ಗೈಡ್ ವಿಂಗ್ ಶ್ರೀಮತಿ ಆಶಾಲತ, ಕಾಸರಗೋಡು ಜಿಲ್ಲಾ ಕಮಿಷನರ್ ಗೈಡ್ ಶ್ರೀಮತಿ ಶ್ರೀ ಕುಮಾರಿ ಟೀಚರ್, ಮಂಜೇಶ್ವರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್ ಸಿ, ಎಡಿಒಸಿ ಸ್ಕೌಟ್ಸ್ ನಾರಾಯಣರಾಜ್, ಎಡಿಒಸಿ ಗೈಡ್ಸ್ ಶ್ರೀಮತಿ ಸುಕನ್ಯ ಕೆ.ಟಿ ಶುಭ ಹಾರೈಸಿದರು. ಎಸ್ಎಟಿ ಶಾಲಾ ಸಿಬ್ಬಂದಿ ವರ್ಗದ ಕಾರ್ಯದರ್ಶಿ ಈಶ್ವರ ಮಾಸ್ಟರ್ ಕಿದೂರು, ಸಾಮಾಜಿಕ ಕಾರ್ಯಕರ್ತ ದಯಾಕರ ಮಾಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಫೌಂಡೇಶನ್ ಡೇ ಪ್ರಯುಕ್ತ ಜರಗಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಆಯೋಜಿಸಿ ಆತಿಥ್ಯ ವಹಿಸಿದ ಶ್ರೀ ರಾಘವನ್ ಹಾಗೂ ಕುಟುಂಬಸ್ಥರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಮಂಜೇಶ್ವರ ಸ್ಥಳೀಯ ಸಂಸ್ಥೆಯ ಜತೆ ಕಾರ್ಯದರ್ಶಿ ಶ್ರೀಮತಿ ಪದ್ಮಿನಿ ಟೀಚರ್ ಸ್ವಾಗತಿಸಿದರು, ಶ್ರೀಮತಿ ಸುಕನ್ಯಾ ಟೀಚರ್ ವಂದಿಸಿದರು, ಶ್ರೀಮತಿ ಉಷಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಪೂರ್ಣಯ್ಯ ಪುರಾಣಿಕ ಹಾಗೂ ಶ್ರೀ ಲಕ್ಷ್ಮಿಧಾಸ್ ಪ್ರಭು ಸಹಕರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಧನ್ಯವಾದ
ردحذفإرسال تعليق