ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಂದಕಕ್ಕೆ ಲಾರಿ ಉರುಳಿ ಬಿದ್ದು; ನಾಲ್ವರು ಸಾವು, 5ಮಂದಿಗೆ ಗಾಯ

ಕಂದಕಕ್ಕೆ ಲಾರಿ ಉರುಳಿ ಬಿದ್ದು; ನಾಲ್ವರು ಸಾವು, 5ಮಂದಿಗೆ ಗಾಯ

 


ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಲಾರಿಯಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.

ಮೃತ ನಾಲ್ವರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಿಯಾರು ಜೋಡುಕಟ್ಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಚಾಲಕ ವಿಘ್ನೇಶ್, ಶ್ರೀಜಿತ್, ಮಂಜುನಾಥ, ಮಣಿ ಮೃತಪಟ್ಟವರು.

ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಗುಂಬೆ ಘಾಟಿಯಲ್ಲಿ ವಾಹನ ಚಲಾಯಿಸುವ ವೇಳೆ ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರಿನಿಂದ ಈ ಲಾರಿ ಕಾರವಾರಕ್ಕೆ ತೆರಳುತ್ತಿತ್ತು.


ಘಟನೆಯಿಂದಾಗಿ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹ ಮತ್ತು ಗಾಯಾಳುಗಳನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು.

ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.




0 Comments

Post a Comment

Post a Comment (0)

Previous Post Next Post