ಕಡಬ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಡಬ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಇವರು ಆಗಮಿಸಿದ್ದು, ಅವರಿಗೆ ಕಡಬ ಘಟಕದ ಗೃಹರಕ್ಷಕ ದಳದ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕಡಬ ಗೃಹರಕ್ಷಕದಳದ ಕಛೇರಿಗಾಗಿ ಈ ಹಿಂದೆ 2004ರ ಆ.10ರಂದು ಜಿಲ್ಲಾಡಳಿತ 5 ಸೆಂಟ್ಸ್‌ಗಳ ಜಾಗವನ್ನು ಮಂಜೂರಾತಿ ಮಾಡಿತ್ತು. ಸರ್ವೆ ನಂಬ್ರ 209ರಲ್ಲಿ ಕಡಬ ಪೇಟೆಯ ಹೃದಯಭಾಗದಲ್ಲಿ ಈ ಜಾಗ ಇದೆ. ಮಾನ್ಯ ಸಚಿವರು ತಮ್ಮ ಅನುಧಾನದಿಂದ ಈ ಕಛೇರಿಗೆ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಎಲ್ಲಾ ಗೃಹರಕ್ಷಕರ ಸಮ್ಮುಖದಲ್ಲಿ ಸಮಾದೇಷ್ಟರು ಮನವಿ ಮಾಡಿದರು. ಗೃಹರಕ್ಷಕರು ಮತ್ತು ಗೃಹರಕ್ಷಕರಿಗೆ ಕೊಠಡಿಯ ತುರ್ತು ಅಗತ್ಯತೆ ಇದೆ ಎಂದು ಸಚಿವರಿಗೆ ಮನದಟ್ಟು ಮಾಡಲಾಯಿತು ಮತ್ತು ಸಚಿವರ ಈ ವಿಚಾರದ ಬಗ್ಗೆ ಸೂಕ್ತ ಪ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಮಯದಲ್ಲಿ ಕಡಬ ಘಟಕದ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ, ಹಿರಿಯ ಗೃಹರಕ್ಷಕ ಉದಯಶಂಕರ್, ಗೃಹರಕ್ಷಕರಾದ ವಾಣಿ, ರವಿ, ಮೋನಪ್ಪ, ಮೀನಾಕ್ಷಿ, ಪವಿತ್, ಪ್ರಮಿತಾ, ಕುಸುಮ ಭಟ್ ಮೊದಲಾದವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment