ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಠಿಣ ಮತಾಂತರ ನಿಷೇಧ ಕಾನೂನು ಶೀಘ್ರ ಜಾರಿಗೊಳಿಸಿ: ಹಿಂ.ಜಾ.ವೇ. ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಆಗ್ರಹ

ಕಠಿಣ ಮತಾಂತರ ನಿಷೇಧ ಕಾನೂನು ಶೀಘ್ರ ಜಾರಿಗೊಳಿಸಿ: ಹಿಂ.ಜಾ.ವೇ. ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಆಗ್ರಹ


ಶನಿವಾರಸಂತೆ (ಕೊಡಗು): ದೇಶದ ಹಲವು ಭಾಗಗಳಲ್ಲಿ ಸನಾತನ ಹಿಂದು ಧರ್ಮದ ಮೇಲೆ ಮತಾಂತರದ ಆಕ್ರಮಣಗಳು ನಡೆಯುತ್ತಿದ್ದು ಜಾಗೃತ ಹಿಂದು ಸಮಾಜ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಅನಿವಾರ್ಯತೆಯಿದೆ ಎಂದು ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗ ಮಾತೃ ಸುರಕ್ಷಾ ಪ್ರಮುಖರಾದ ಗಣರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.


ಕೊಡಗು ಜಿಲ್ಲೆಯ ಶನಿವಾರಸಂತೆಯ ಮನೆಯೊಂದರಲ್ಲಿ ಆರ್ಥಿಕವಾಗಿ ಸಬಲರಲ್ಲದ ಅಮಾಯಕ ಹಿಂದುಗಳನ್ನು ಸೇರಿಸಿಕೊಂಡು ಗೌಪ್ಯವಾಗಿ ಮತಾಂತರ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ದಿನ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆಯ ನೇತತ್ವದಲ್ಲಿ ನಡೆದ ಹಿಂದು ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗಣರಾಜ್ ಭಟ್ ದೇಶದಲ್ಲಿ ಯಾವುದೇ ಮತದವರು ತಮ್ಮ ತಮ್ಮ ಮತವನ್ನು ಪಾಲನೆ ಮಾಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಹಿಂದುಗಳನ್ನು ಮತಾಂತರಕ್ಕೆ ಪ್ರೇರೆಪಿಸಿದರೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದೆಂದರು.




ಹಿಂದುಗಳ ಸಹನೆಯನ್ನು ದೌರ್ಬಲ್ಯವೆಂದು ಅನ್ಯ ಮತದವರು ಎಂದಿಗೂ ಪರಿಗಣಿಸಬಾರದು ಶಸ್ತ್ರ ಮತ್ತು ಶಾಸ್ತ್ರ ಇವೆರಡನ್ನೂ ಚೆನ್ನಾಗಿ ಬಲ್ಲ ಹಿಂದು ಸಮಾಜದ ಮೇಲೆ ಮತಾಂತರದ ಧಾಳಿ ನಡೆದರೆ ಜಾಗೃತ ಹಿಂದು ಸಮಾಜ ಸಹಿಸುವುದಿಲ್ಲ ಎಂದು ಈ ಸಂದರ್ಭ ಎಚ್ಚರಿಕೆ ನೀಡಿದರು.ಹಿಂ.ಜಾ.ವೇ ನಡೆಸಿದ ಧಾಳಿಯ ವೇಳೆ ಸಿಕ್ಕಿಬಿದ್ದ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಸ್ಥಳೀಯ ಗ್ರಾಮ ಪಂಚಾಯಿತಿಯ ವಾಟರ್ ಮೆನ್ ನನ್ನು ಕೆಲಸದಿಂದ ವಜಾ ಪಡಿಸಬೇಕೆಂದು ಆಗ್ರಹಿಸಲಾಯಿತು.


ಮತಾಂತರದ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಸ್ಥಳಿಯಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಿ ಕೊಡಲಾಯಿತು. ಹಿಂದು ಜನಜಾಗೃತಿ ಕಾರ್ಯಕ್ರಮದಲ್ಲಿ ಹಿಂ.ಜಾ.ವೇ ಯ ಜಿಲ್ಲಾ ಉಪಾಧ್ಯಕ್ಷರಾದ ಸುಭಾಷ್ ತಿಮ್ಮಯ್ಯ, ಸಹ ಸಂಪರ್ಕ್ ಪ್ರಮುಖ್ ಉಮೇಶ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಮಾದಪುರ ಸುನಿಲ್, ಪ್ರಧಾನ ಕಾರ್ಯದರ್ಶಿ ರಂಜನ್ ಗೌಡ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


0 Comments

Post a Comment

Post a Comment (0)

Previous Post Next Post