ಸ್ವಚ್ಚತೆಗೆ ಇಳಿದರೆ, ಊರುತುಂಬ ಸಿಗುವುದು ಪಾನ್ ಪರಾಗ್, ವಿಮಲ್, ಮಧು, ಜರ್ದಾ, ಗುಟುಕಾ ಪೌಚ್‌ಗಳ ಪ್ಲಾಸ್ಟಿಕ್ ತ್ಯಾಜ್ಯಗಳೇ!!!
ಮೇಲುಕೊಪ್ಪದಲ್ಲೊಂದು ಯಶಸ್ವೀ ಗ್ರಾಮ ಸ್ವಚ್ಚತಾ ಕಾರ್ಯಕ್ರಮ.
ಗಾಂಧೀ ಜಯಂತಿ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಮೇಲುಕೊಪ್ಪದಲ್ಲಿ ಗ್ರಾಮಸ್ಥರೆಲ್ಲ ಸೇರಿ ಗ್ರಾಮದ ಮುಖ್ಯ ರಸ್ತೆ, ಶಾಲಾ ಆವರಣ, ಬಸ್ಟಾಪ್, ರಸ್ತೆ ಪಕ್ಕದ ಹಾಡ್ಯ, ಅಂಗಡಿ ಮುಂಭಾಗಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲಾಯಿತು.
ಸಂಗ್ರಹಿಸಿದ ಅಷ್ಟೂ ಕಸದಲ್ಲಿ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚಾಗಿ ಇದ್ದು, ಅದರಲ್ಲೂ ಮೂಟೆ ಗಟ್ಟಳೆ ಪಾನ್ ಪರಾಗ್, ವಿಮಲ್, ಮಧು, ಜರ್ದಾ, ಗುಟುಕಾ, ಇವನಿಂಗ್ ಡ್ರಿಂಕ್ಸ್(!!?) ಪೌಚ್‌ಗಳ ಪ್ಲಾಸ್ಟಿಕ್ ತ್ಯಾಜ್ಯಗಳೇ ಹೆಚ್ಚಿದ್ದವು!!
ಇದರ ಹೊರೆತಾಗಿ, ಕುರ್‌ಕುರೇ, ಲೇಸ್, ಚಿಪ್ಸ್ ಕವರ್‌ಗಳ ತ್ಯಾಜ್ಯಗಳು!!
ಸುಂದರ ಮಲೆನಾಡು ಕೂಡ ನಿಧಾನವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಎಂದೂ ಕರಗದ ಹೊದಿಕೆಯನ್ನು ಪಡೆದುಕೊಳ್ಳುತ್ತಿದೆ!!!
ಮಲೆನಾಡಿನ ಜನರಿಗೆ ಮಾತ್ರ ಅಲ್ಲ, ಮಲೆನಾಡ ಪರಿಸರಕ್ಕೂ ಈ ಪ್ಲಾಸ್ಟಿಕ್ ಕ್ಯಾನ್ಸರ್ ತರುವ ದಿನಗಳು ಹೆಚ್ಚು ದೂರವಿಲ್ಲ!!
ಇದು ಬರಿ ಮೇಲುಕೊಪ್ಪದ ಕತೆಯಲ್ಲ!! ಅಲ್ವಾ!!?
-ಅರವಿಂದ ಸಿಗದಾಳ್, ಮೇಲುಕೊಪ್ಪ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق