ಮಂಗಳೂರು: ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಲವಲವಿಕೆ ಹೆಚ್ಚುತ್ತದೆ. ಬಾಲ್ಯದಿಂದಲೇ ಸಂಗೀತ, ಸಾಹಿತ್ಯ, ಲಲಿತಕಲೆಗಳ ಅಭಿರುಚಿ ಹುಟ್ಟಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಓದುವ ಮತ್ತು ಬರೆಯುವ ಆಸಕ್ತಿ ಇದ್ದಾಗ ತನ್ನ ಬರವಣಿಗೆ ಸೃಜನಶೀಲವಾಗಿರುತ್ತದೆ. ಓದಿನಿಂದ ಜ್ಞಾನ ಪ್ರಜ್ಞಾಶೀಲವಾಗುತ್ತದೆ. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ದಸರಾ ಹಬ್ಬದ ಪ್ರಯುಕ್ತ ಡಿಜಿಟಲ್ ವೇದಿಕೆಯಲ್ಲಿ ತಂತ್ರಜ್ಞಾನದ ಮೂಲಕ ಬಹುಭಾಷಾ ಇರುಳು ಕವಿಗೋಷ್ಠಿ ಏರ್ಪಡಿಸಿ ದೇಶ ವಿದೇಶದ ವಿವಿಧ ಭಾಷೆಯ ಕವಿ ಕವಯಿತ್ರಿಯವರನ್ನು ಒಟ್ಟು ಸೇರಿಸುತ್ತಿರುವುದು ಅಪೂರ್ವ ಮತ್ತು ಶ್ಲಾಘನೀಯ ಕಾರ್ಯ' ಎಂದು ಹಿರಿಯ ಸಾಹಿತಿ ಜೆ.ಎಫ್. ಡಿಸೋಜಾ ಅವರು ಹೇಳಿದರು.
ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮಂಗಳವಾರ ಅಂತರ್ಜಾಲ ವೇದಿಕೆ ಕ್ಲಬ್ ಹೌಸ್ ನಲ್ಲಿ ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಬಹುಭಾಷಾ ಇರುಳು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ದ.ಕ. ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಹಿರಿಯ ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಶ್ಮಿ ಸನಿಲ್, ರೇಖಾ ಸುದೇಶ್ ರಾವ್, ಡಾ.ಅರ್ಚನಾ ಎನ್ ಪಾಟೀಲ ಹಾವೇರಿ, ಡಾ.ಸುರೇಶ್ ನೆಗಳಗುಳಿ,ಹಿತೇಶ್ ಕುಮಾರ್ ಎ, ಸುರಭಿ ಶಿವಮೊಗ್ಗ, ಆಕೃತಿ ಐ ಎಸ್ ಭಟ್, ಪ್ರೇಮ್, ಅರ್ಚನಾ ಎಂ ಕುಂಪಲ, ಸುಶೀಲ ಕೆ ಪದ್ಯಾಣ, ವೆಂಕಟ ಭಟ್ ಎಡನೀರು, ಫಣಿಶ್ರೀ ನಾರಾಯಣನ್ ಅಮೆರಿಕಾ, ನಾರಾಯಣ ನಾಯ್ಕ ಕುದುಕೋಳಿ, ಪ್ರಕಾಶ ಯಲ್ಲಪ್ಪ ಕೊಪ್ಪದ, ವಾಣಿ ಲೋಕಯ್ಯ, ಅಸುಂತ ಡಿಸೋಜಾ, ವಿದ್ಯಾಶ್ರೀ ಅಡೂರು, ಸುಪ್ರಿಯ ಮಂಗಳೂರು, ದೀಪಾಲಿ ಸಾಮಂತ, ಗೀತಾ ಲಕ್ಷ್ಮೀಶ್ ಮಂಗಳೂರು, ವೀಣಾ ಗಣಪತಿ ಹೆಗಡೆ, ಸೌಮ್ಯ ಆರ್ ಶೆಟ್ಟಿ, ರೇಮಂಡ್ ಡಿಕುನಾ, ರತ್ನ ಕೆ ಭಟ್ ತಲಂಜೇರಿ, ಪದ್ಮಶ್ರೀ ಪ್ರಶಾಂತ್ ಬೆಂಗಳೂರು, ಅರುಂಧತಿ ರಾವ್, ನಳಿನಾಕ್ಷಿ ಉದಯರಾಜ್, ಮಾನಸ ಪ್ರವೀಣ್ ಭಟ್ ಮೂಡಬಿದ್ರಿ, ಜನಾರ್ದನ ದುರ್ಗಾ, ಲಕ್ಷ್ಮೀ ವಿ ಭಟ್ ವಿಘ್ನೇಶ್ ಭಿಡೆ, ಮಂಜುಶ್ರೀ ಯನ್. ನಲ್ಕ, ಡಾ.ಕೇಶವರಾಜ್ ಅಮೆರಿಕಾ, ಬದ್ರುದ್ದೀನ್ ಕೂಳೂರು, ಬಸವರಾಜ್ ಚೌಡ್ಕಿ ಕೊಪ್ಪಳ, ಕುಮುದಾ ಶೆಟ್ಟಿ ಮುಂಬೈ, ಅರುಂಧತಿ ವಿ. ರಾವ್, ಸುನಿಲ್ ಬೆಳಗಾವಿ, ವಿಜಯಲಕ್ಷ್ಮೀ ಕಟೀಲು, ಅರುಣಾ ನಾಗರಾಜ್, ಲತೀಶ್ ಎಂ ಸಂಕೊಳಿಗೆ, ನಿರ್ಮಲ ಶೇಷಪ್ಪ ಖಂಡಿಗೆ, ದ್ಯಾವಪ್ಪ ಎಂ. ಕಾರವಾರ, ಮಂಜುಳಾ ರಾವ್, ವಾಷಿಂಗ್ಟನ್, ಆಶಾ ಯಮಕನಮರಡಿ ಬೆಳಗಾವಿ, ವಿಜಯಲಕ್ಷ್ಮೀ ಎಸ್ ಮೈಸೂರು, ಸತ್ಯವತಿ ಭಟ್ ಕೊಳಚಪ್ಪು, ಮುದ್ದು ಮೂಡುಬೆಳ್ಳೆ, ಶರಣ್ಯ ಪಡುಪಣಂಬೂರು, ಡಾ.ಸುಧಾ ಜೋಶಿ ಧಾರವಾಡ ಮೊದಲಾದವರು ಕನ್ನಡ ತುಳು ಇಂಗ್ಲಿಷ್ ಕೊಂಕಣಿ ಸಂಸ್ಕೃತ,ಮಲಯಾಳಂ ಭಾಷೆಗಳಲ್ಲಿ ತಮ್ಮ ಕವನಗಳನ್ನು ಪ್ರಸ್ತುತ ಪಡಿಸಿದರು.
ಆಕೃತಿ ಐ ಎಸ್ ಭಟ್ ಅವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಕಟೀಲು ಹಾಗೂ ಸಂಕೊಳಿಗೆ ಕಾರ್ಯಕ್ರಮ ನಿರೂಪಿಸಿದರು. ತ್ರಿಶೂಲ್ ಶೆಟ್ಟಿ ತಾಂತ್ರಿಕ ಸಹಕಾರ ನೀಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment