ಹಳೆಯಂಗಡಿ: ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ನೇತೃತ್ವದಲ್ಲಿ, ಮಂಡಲದ ಸಭಾಂಗಣದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಶಿಬಿರವು ನಡೆಯಿತು.
ದ.ಕ ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಮತ್ತು ವೆನ್ಲಾಕ್ ಜಿಲ್ಲಾಸ್ಪತ್ರೆಯ ಜಿಲ್ಲಾ ಸಂಚಾರಿ ನೇತ್ರ ಘಟಕ ಸಹಯೋಗದಲ್ಲಿ ಮತ್ತು ಶ್ರೀ ವಿದ್ಯಾವಿನಾಯಕ ರಜತಸೇವಾ ಟ್ರಸ್ಟ್ (ರಿ), ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಜಿಲ್ಲಾ ಪ್ರಶಸ್ತಿ ವಿಜೇತ, ಯುವತಿ ಮತ್ತು ಮಹಿಳಾಮಂಡಲ (ರಿ) ಹಳೆಯಂಗಡಿ, ದ.ಕ, ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್, ಹಳೆಯಂಗಡಿ, ಬಿಲ್ಲವ ಸಮಾಜ ಸೇವಾ ಸಂಘ (ರಿ) ಮತ್ತು ಯುವ ವಾಹಿನಿ (ರಿ), ಹಳೆಯಂಗಡಿ ಘಟಕ, ದೇವಾಡಿಗ ಸಮಾಜ ಸೇವಾ ಸಂಘ (ರಿ), ಮಹಿಳಾ ವೇದಿಕೆ, ಯುವ ವೇದಿಕೆ, ಪಾವಂಜೆ, ಶ್ರೀ ಭಗವತೀ ತೀಯಾ ಸಂಘ, ಕದಿಕೆ, ಹಳೆಯಂಗಡಿ ಮತ್ತು ಆಟೋ ಫ್ರೆಂಡ್ಸ್ (ರಿ), ಹಳೆಯಂಗಡಿ ಇವರ ಸಹಕಾರದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಹಳೆಯಂಗಡಿ ಹಾಗೂ ಹತ್ತಿರದ ಗ್ರಾಮದ 225ಕ್ಕೂ ಅಧಿಕ ಜನರು ಭಾಗವಹಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ಮಾತನಾಡಿ, ಕಣ್ಣುಗಳು ಇದ್ದಾಗ ಮಾತ್ರ ಪ್ರಾಕೃತಿಕ ಸೌಂದರ್ಯ ಸವಿಯಲು ಸಾಧ್ಯ. ದೃಷ್ಟಿ ದುರ್ಬಲಗೊಂಡರೆ, ಸಮಾಜದತ್ತ ನೋಡೋ ಸೂಕ್ಷ್ಮತೆ ಇಲ್ಲದಂತಾಗುತ್ತದೆ. ಹಾಗಾಗಿ ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರಿನ ದೃಷ್ಟಿ ಆಪ್ಟಿಕಲ್ಸ್ ಇದರ ಮಾಲಕರು ಡಾ. ಅನಿಲ್, ಶಿಬಿರದ ಬಗೆಗಿನ ಸಂಪೂರ್ಣ ಮಾಹಿತಿ ಹಾಗೂ ವಿವರಗಳನ್ನು ನೀಡಿದರು ಹಾಗೂ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಹಲವು ಸೌಲಭ್ಯಗಳನ್ನೂ ವಿವರಿಸಿ ಹೇಳಿದರು.
ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು ಸುಧಾಕರ್ ಆರ್ ಅಮೀನ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞರು, ಡಾ. ಅನಿತಾ ಕಿರಣ್, ಬೆಂಗಳೂರಿನ ಸಾಹಸ್ ಸಂಸ್ಥೆಯ ಕುಮಾರಿ ಪವಿತ್ರ, ಲಯನ್ಸ್ ಕ್ಲಬ್ ಹಳೆಯಂಗಡಿಯ ಅಧ್ಯಕ್ಷರು ಅರುಣ್ ಕುಮಾರ್ ಶೆಟ್ಟಿ, ಲಿಯೋ ಕ್ಲಬ್ ಹಳೆಯಂಗಡಿ ಇದರ ಅಧ್ಯಕ್ಷರು ಪ್ರತೀಕ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ಚಂದ್ರಶೇಖರ್ ನಾನಿಲ್, ಯುವ ವಾಹಿನಿ (ರಿ), ಹಳೆಯಂಗಡಿ ಘಟಕ ಇದರ ಅಧ್ಯಕ್ಷ ಹರೀಶ್ ಅಮೀನ್, ದೇವಾಡಿಗ ಸಮಾಜ ಸೇವಾ ಸಂಘ (ರಿ), ಪಾವಂಜೆ ಇದರ ಅಧ್ಯಕ್ಷರು ರಾಮದಾಸ್ ಪಾವಂಜೆ, ಇದರ ಮಹಿಳಾ ವೇದಿಕೆಯ ಅಧ್ಯಕ್ಷರು ವಿಮಲಾ ದೇವಾಡಿಗ, ಶ್ರೀ ಭಗವತೀ ತೀಯಾ ಸಂಘ, ಕದಿಕೆ ಇದರ ಅಧ್ಯಕ್ಷರು ಸುರೇಶ್ ಬಂಗೇರ, ಆಟೋ ಫ್ರೆಂಡ್ಸ್ (ರಿ), ಹಳೆಯಂಗಡಿ ಇದರ ಅಧ್ಯಕ್ಷರು ಸತೀಶ್, ಸಲಹಾ ಸಮಿತಿಯ ಅಧ್ಯಕ್ಷರಾದ ಸದಾಶಿವ ಅಂಚನ್, ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾಮಂಡಲ (ರಿ) ಹಳೆಯಂಗಡಿ ಇದರ ಅಧ್ಯಕ್ಷರು ದಿವ್ಯಶ್ರೀ ಕೋಟ್ಯಾನ್ ಮತ್ತು ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಮರಣಿಕೆ ನೀಡಲಾಯಿತು. 157 ಜನರಿಗೆ ಯುವಕ ಮಂಡಲ ಮತ್ತು ಟ್ರಸ್ಟಿನ ವತಿಯಿಂದ ರೂಪಾಯಿ 15,000 ದ ವೆಚ್ಚದಲ್ಲಿ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು. 12 ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಬರಲು ಸೂಚಿಸಲಾಯಿತು.
ವಿದ್ಯಾವಿನಾಯಕ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಇಂದುಧರ ಹಳೆಯಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಯತೀಶ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಹಳೆಯಂಗಡಿಯ ವಿಶೇಷಚೇತನ ವ್ಯಕ್ತಿಯಾದ ಮಾಸ್ಟರ್ ರಕ್ಷಣ್ ಪ್ರಾರ್ಥನೆ ನೆರವೇರಿಸಿದರು. ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಇದರ ಕಾರ್ಯದರ್ಶಿ ಸ್ಟ್ಯಾನಿ ಡಿ’ಕೋಸ್ತಾ ಧನ್ಯವಾದ ಅರ್ಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment