ಬಂಟ್ವಾಳ: ಭಾರತದಲ್ಲಿ 100 ಕೋಟಿಗಿಂತಲೂ ಅತ್ಯಧಿಕ ಕೋವಿಡ್ ಲಸಿಕಾ ಡೋಸ್ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ಭಾರತವು ಪಾತ್ರರಾಗಿ ಇತರ ದೇಶಗಳಿಗೆ ಮಾದರಿಯಾಗಿದೆ.
ಇದರ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ಆಶಯದಂತೆ ಈ ಕಾರ್ಯಸಾಧನೆಗೆ ನೆರವಾದ ಆರೋಗ್ಯ ಇಲಾಖೆಯ ವೈದ್ಯರು ಮತ್ತು ದಾದಿಯರು, ಆಶಾ ಕಾರ್ಯಕರ್ತೆಯರನ್ನೂ ಗೌರವಿಸುವ ಕಾರ್ಯಕ್ರಮ ಬಿಜೆಪಿ ವತಿಯಿಂದ ರಾಷ್ಟದಾಧ್ಯಂತ ನಡೆಯುತ್ತಿದ್ದು ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ 100 ಕೋಟಿಗೂ ಅತ್ಯಧಿಕ ಕೋವಿಡ್ ಲಸಿಕೆ ಹಾಕಲಾಗಿದೆ. ಈ ನಿಟ್ಟಿನಲ್ಲಿ ಜೀವದ ಹಂಗು ತೊರೆದು ಹಗಲು-ರಾತ್ರಿ ಸೇವೆ ಸಲ್ಲಿಸಿರುವ ಸರಕಾರಿ ಆಸ್ಪತ್ರೆ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಎಂದೂ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅಭಿಪ್ರಾಯ ಪಟ್ಟರು.
ಅವರು ಇವತ್ತು ನೂರು ಕೋಟಿ ಕೋವಿಡ್ ಡೋಸ್ ಲಸಿಕಾ ನೀಡಿರುವ ಭಾರತದ ಸಾಧನೆ ಅಂಗವಾಗಿ ಕರ್ಪೆ ಗ್ರಾಮದ ಅಂಚೆ ಕಚೇರಿ ಬಳಿ ಇರುವ ಆರೋಗ್ಯ ಉಪ ಕೇಂದ್ರದಲ್ಲಿ ಕರ್ಪೆ ಗ್ರಾಮಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀ ಮತಿ ಗೀತಾ, ಆಶಾ ಕಾರ್ಯಕರ್ತೆ ಶ್ರೀಮತಿ ಬಾನುಮತಿ ಇವರಿಬ್ಬರನ್ನೂ ಕರ್ಪೆ ಬಿಜೆಪಿ ಬುತ್ ಸಮಿತಿಗಳ ವತಿಯಿಂದ ಗೌರವಿಸಿ ಮಾತಾನಾಡಿದರು.
ನಿವೃತ್ತ ಶಿಕ್ಷಕ ಕೆ. ನಾರಾಯಣ ನಾಯಕ್ ಇಬ್ಬರಿಗೂ ಶಾಲು ಹಾಕಿ ಗೌರವಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಕೋಟಿಯಪ್ಪ ಪೂಜಾರಿ, ವಿದ್ಯಾ ಪ್ರಭು, ಬೂತ್ ಅಧ್ಯಕ್ಷರುಗಳಾದ ನವೀನ್ ಪೂಜಾರಿ, ತೇಜಸ್ ಮರ್ದೋಟ್ಟು, ಹಿರಿಯರಾದ ಸಂಜೀವ ಶೆಟ್ಟಿ ಮದಂಗೋಡಿ, ಸುಂದರ ಪೂಜಾರಿ ನೆಕ್ಲಾಜೆ, ಚಂದ್ರಶೇಖರ ಪೂವಳ, ಪ್ರಮುಖರಾದ ರಾಮಕೃಷ್ಣ ನಾಯಕ್ ಕಿನ್ನಜೆ, ಹರೀಶ್ ಪೂಜಾರಿ ಶೆಟ್ಟಿಬೆಟ್ಟು ಭಾಸ್ಕರ್ ಪ್ರಭು, ವಿಶ್ವನಾಥ ಆಚಾರ್ಯ, ಜಯ ಪೂಜಾರಿ ಕುಪ್ಪೆಟ್ಟು, ಭಾಸ್ಕರ ನಾಯಕ್ ಹಲಾಯಿ, ವೀಣಾ ನಾಯಕ್, ಸುಮತಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment