ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಸುಕೇಶ ರಾವ್ ಮೂಲಿಗಾರ್ ರವರು ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ.
ಆಯುರ್ವೇದದಲ್ಲಿನ ನಾಡಿ ವಿಜ್ಞಾನದ ಕುರಿತು "ಎ ನೊವೆಲ್ ಇನ್ಸ್ಟ್ರುಮೆಂಟೇಷನ್ ಸಿಸ್ಟಮ್ ಫಾರ್ ಡಿಸೀಸ್ ಡಯಗ್ನೋಸಿಸ್ ಯೂಸಿಂಗ್ ಪಲ್ಸ್ ರೀಡಿಂಗ್" ಎಂಬ ವಿಷಯದಲ್ಲಿ ಎನ್.ಐ.ಟಿ.ಕೆ ಸುರತ್ಕಲ್ ನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಡಾ.ರತ್ನಮಾಲಾ ರಾವ್ ರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಲಾಗಿತ್ತು. ಸುಕೇಶ್ ಅವರು ಉಡುಪಿಯ ತೆಂಕನಿಡಿಯೂರು ಗ್ರಾಮದ ಮಾಧವಿ ರಾವ್ ಮತ್ತು ದಿವಂಗತ ಮೂಲಿಗಾರ್ ರಾಘವೇಂದ್ರ ರಾಯರ ಪುತ್ರ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment