ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ- ಮೂರನೇ ದಿನ

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ- ಮೂರನೇ ದಿನ


 


ಧರ್ಮಸ್ಥಳ: ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟವು ಯಶಸ್ವಿಯಾಗಿ ನಡೆಯುತ್ತಿದೆ.


ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಮ್ಮಟಕ್ಕೆ ಆಗಮಿಸಿ ಮಾರ್ಗದರ್ಶನ ನೀಡಿದರು. ಹಾಡಿನ ಅರ್ಥ ಹಾಗೂ ಭಾವವನ್ನು ಅರಿತುಕೊಂಡು ಮನದಾಳದಲ್ಲಿ ಸರಿಯಾದ ಭಾವನೆಯಿಂದ, ಶ್ರದ್ಧೆಯಿಂದ ಸೂಕ್ತ ತಾಳದೊಂದಿಗೆ ಹಾಡನ್ನು ಹಾಡಬೇಕು. ದೇವರ ಚಿತ್ರವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಹಾಡಬೇಕು. ಪೂಜ್ಯರ ಉಪಸ್ಥಿತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿದುಷಿ ಶ್ರೀಮತಿ ಅನಸೂಯ ಪಾಠಕ್, ಶ್ರೀಮತಿ ಮನೋರಮಾ ತೋಳ್ಪಡಿತ್ತಾಯ, ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಭಜನಾ ಹಾಡುಗಳನ್ನು ಶಿಬಿರಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು.


ಧಾರ್ಮಿಕ ಉಪನ್ಯಾಸದಲ್ಲಿ ಗ್ರಾಮೀಣ ಅಭಿವೃದ್ಧಿಯಲ್ಲಿ ಭಜನಾ ಮಂಡಳಿಯ ಪಾತ್ರದ ಬಗ್ಗೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್ ಮಾತನಾಡಿ ಭಜನಾ ಮಂಡಳಿಗಳು ಮಾಡಬಹುದಾದ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ಕಮ್ಮಟದ ಒಂದನೇ ದಿನ ವಿದುಷಿ ಶ್ರೀಮತಿ ಅನಸೂಯ ಪಾಠಕ್, ಎರಡನೆಯ ದಿನ ಶ್ರೀಮತಿ ಮನೋರಮಾ ತೋಳ್ಪಡಿತ್ತಾಯ ಮತ್ತು ಮೂರನೆಯ ದಿನ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ತರಬೇತಿ ನೀಡಿದರು. ಕುಣಿತ ಭಜನೆಯನ್ನು ಶ್ರೀ ರಮೇಶ್ ಕಲ್ಮಾಡಿ, ಶ್ರೀ ಶಂಕರ್ ಮತ್ತು ತಂಡ ಹಾಗೂ ಕು. ಚೈತ್ರಾ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಂಗಶಿವ ಕಲಾಬಳಗ ಧರ್ಮಸ್ಥಳದವರಿಂದ ಕಿರುನಾಟಕ ಹಾಗೂ ರಂಗಗೀತೆಗಳ ಮೂಲಕ ರಂಜಿಸಿದರು.


ಮಾಣಿಲ ಶ್ರೀ ಧಾಮ ಪ್ರತಿಷ್ಠಾನದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ಕಮ್ಮಟದ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಮಮತಾ ರಾವ್, ಭಜನಾ ಪರಿಷತ್‍ನ ಕಾರ್ಯದರ್ಶಿ ಶ್ರೀ ಬಿ. ಜಯರಾಮ ನೆಲ್ಲಿತ್ತಾಯ. ಕೋಶಾಧಿಕಾರಿಗಳಾದ ಶ್ರೀ ಡಿ. ಧರ್ಣಪ್ಪ, ಸದಸ್ಯರಾದ ಶ್ರೀ ಭುಜಬಲಿ ಬಿ, ಶ್ರೀ ರತ್ನವರ್ಮ ಜೈನ್, ಶ್ರೀ ಶ್ರೀನಿವಾಸ್‍ರಾವ್ ಮತ್ತು  ಶ್ರೀಮತಿ ಸುನಿತಾರವರು ಉಪಸ್ಥಿತರಿದ್ದು ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم