ಮಂಗಳೂರು: “ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಮಾಸಾಚರಣೆ” ಅಂಗವಾಗಿ ರಕ್ತದಾನ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ (ಅ.29) ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ|| ಶರತ್ ಕುಮಾರ್ “ರಕ್ತದಾನ ಮಾಡುವುದರಲ್ಲಿ ಗೃಹರಕ್ಷಕರು ಯಾವಾಗಲೂ ಮುಂಚೂಣಿಯಲ್ಲಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ. ವರ್ಷಕ್ಕೆ 4 ಬಾರಿ ರಕ್ತದಾನ ಶಿಬಿರ ಆಯೋಜಿಸಿ ನಿರಂತರವಾಗಿ ರಕ್ತನಿಧಿಗೆ ರಕ್ತ ದೊರಕಿಸಿಕೊಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಜಿಲ್ಲೆಯಾದ್ಯಾಂತ ರಕ್ತದಾನದ ಜಾಗೃತಿ ಶಿಬಿರ ನಿರಂತರವಾಗಿ ನಡೆಸುತ್ತಿರುವುದು ಸಂತಸದ ವಿಚಾರ” ಎಂದು ಅವರು ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಘಟಕಗಳಾದ ಮಂಗಳೂರು ಘಟಕ, ಸುರತ್ಕಲ್ ಘಟಕ, ಮುಲ್ಕಿ ಘಟಕ, ಬಂಟ್ವಾಳ ಘಟಕ, ಪಣಂಬೂರು ಘಟಕಗಳ ಒಟ್ಟು 25 ಮಂದಿ ಗೃಹರಕ್ಷಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ಉಪ ಸಮಾದೇಷ್ಟರಾದ ರಮೇಶ್, ರಕ್ತನಿಧಿ ಮಂಗಳೂರು ವೆನ್‍ಲಾಕ್ ಆಸ್ಪತ್ರೆ ಇದರ ಮುಖ್ಯಸ್ಥರಾದ ಡಾ|| ಶರತ್ ಕುಮಾರ್, ವೈದ್ಯರಾದ ಡಾ|| ಜುಲ್ಫೀಕರ್, ಹಿರಿಯ ಶುಶ್ರೂಶಕಿ ಶ್ರೀಮತಿ ಅನಿತಾ ವೆಲೇರಿಯ ಡಿ’ಸೋಜಾ, ತಂತ್ರಜ್ಞರಾದ ಆಂಟೋನಿ, ಮಂಜುನಾಥ್, ಮಮತಾ ಮುಂತಾದವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment