ಮಂಜೇಶ್ವರ : ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುಂಬಳೆಯ ಇಬ್ಬರು ಯುವಕರು ಮೃತಪಟ್ಟ ಘಟನೆಯೊಂದು ನಿನ್ನೆ ರಾತ್ರಿ ತಲಪಾಡಿ ಕೆ.ಸಿ.ರೋಡ್ ನಲ್ಲಿ ನಡೆದಿದೆ.
ಕುಂಬಳೆ ಕುಂಟಗೇರಡ್ಕದ ಕೆ.ಪ್ರಜಿತ್ (23 ವರ್ಷ) ಮತ್ತು ಕೃಷ್ಣ ಪ್ರಸಾದ್ (25 ವರ್ಷ) ಮೃತರು ಎಂದು ಗುರುತಿಸಲಾಗಿದೆ.
ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ವೇಳೆ ರಾಷ್ಟ್ರೀಯ ಹೆದ್ದಾರಿಯ ಕೆ.ಸಿ. ರೋಡ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
Post a Comment