ಹಾಸನ: ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆಯೊಂದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತ ನಗರದಲ್ಲಿ ನಡೆದಿದೆ.
ಬೇಲೂರಿನತ್ತ ಬರುತ್ತಿದ್ದ ಶಾಸಕರ ಕಾರು ಚಾಲಕ ಅಪಘಾತ ನಡೆಸಿದ್ದು, 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
ಪುತ್ರನ ಸ್ಥಿತಿ ಗಂಭೀರವಾಗಿದ್ದು, ಚಾಲಕನ ವಿರುದ್ಧ ಮದ್ಯ ಸೇವನೆಯಿಂದ ಕಾರು ಚಾಲನೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.
ಕಾರು ರಿಪೇರಿಗೆಂದು ಬೆಂಗಳೂರಿಗೆ ಹೊರಟಿದ್ದ ಎನ್ನಲಾಗಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
إرسال تعليق