ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾವಣ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟ ಅರವಿಂದ್ ತ್ರಿವೇದಿ ನಿಧನ

ರಾವಣ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟ ಅರವಿಂದ್ ತ್ರಿವೇದಿ ನಿಧನ



ಮುಂಬಯಿ: ಜಗತ್‌ ಪ್ರಸಿದ್ಧವಾದ 'ರಾಮಾಯಣ' ಧಾರಾವಹಿಯಲ್ಲಿ ರಾವಣನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಹಿರಿಯ ನಟ ಅರವಿಂದ್ ತ್ರಿವೇದಿ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.


ಅರವಿಂದ್ ಅವರ ಜೊತೆ 'ರಾಮಾಯಣ'ದ ಲಕ್ಷ್ಮಣನ ಪಾತ್ರದಲ್ಲಿ ಸಹನಟರಾಗಿದ್ದ ಸುನೀಲ್ ಲಾಹಿರಿ  ದಿವಂಗತ ನಟನ ಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದು ತುಂಬಾ ದುಃಖದ ಸುದ್ದಿ. ನಮ್ಮ ಪ್ರೀತಿಯ ಅರವಿಂದ್ ಭಾಯಿ (ರಾಮಾಯಣದ ರಾವಣ) ಇನ್ನು ಮುಂದೆ ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ನಾನು ನನ್ನ ತಂದೆ ಸಮಾನರಾದ ನನ್ನ ಮಾರ್ಗದರ್ಶಕ, ಹಿತೈಷಿ ಮತ್ತು ಸಂಭಾವಿತ ವ್ಯಕ್ತಿಯನ್ನು ಕಳೆದುಕೊಂಡೆ ಎಂದು ಟ್ವೀಟ್ ಮಾಡಿದ್ದಾರೆ. '


ಅವರು ಕಳೆದ ತಿಂಗಳು ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಮಂಗಳವಾರ ರಾತ್ರಿ 9:30 ರ ಸುಮಾರಿಗೆ ಮುಂಬೈನ ಕಾಂಡಿವಲಿ ನಿವಾಸದಲ್ಲಿ ಹೃದಯಾಘಾತಕ್ಕೊಳಗಾದರು.

0 تعليقات

إرسال تعليق

Post a Comment (0)

أحدث أقدم