ತುಮಕೂರು: ನಗರದ ಹೊರ ವಲಯದ ಗುಬ್ಬಿ ರಸ್ತೆಯ ಸಿದ್ಧಾರ್ಥ ನಗರದ ಸಮೀಪ ಖಾಸಗಿ ಬಸ್ ಹಾಗೂ ಲಾರಿ ನಡುವೆ ರವಿವಾರ ಬೆಳಗ್ಗಿನ ವೇಳೆ ಅಪಘಾತವಾಗಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರು ಗುಬ್ಬಿ ಮೂಲದ ರೈತರು ಎಂದು ತಿಳಿದು ಬಂದಿದೆ.
ಮಾರುಕಟ್ಟೆಯಿಂದ ಹೂವು ತುಂಬಿಕೊಂಡು ಗುಬ್ಬಿ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ಹಾಗೂ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.
ಮೃತರನ್ನು ಟಾಟಾ ಏಸ್ ನಲ್ಲಿ ಹೋಗುತ್ತಿದ್ದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
Post a Comment