ಹುಬ್ಬಳ್ಳಿ: ತಾರಿಹಾಳ ಬಳಿ ಭಾನುವಾರ ಮುಂಜಾನೆ ವೇಳೆ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದರು.
ಆನಂದ್ (47 ವರ್ಷ) ಮತ್ತು ಪೃಥ್ವಿರಾಜ್ ತೇಲಿ (16 ವರ್ಷ) ಮೃತ ದುರ್ದೈವಿಗಳು. ಮಲ್ಲಿಕಾರ್ಜುನ ತೇಲಿ, ಕಬ್ಬೂರ್ ಆದಿತ್ಯ ಮತ್ತು ಸುಭಾಷ್ ಮಿಶ್ರಕೋಟಿ ಎಂಬುವರು ಗಂಭೀರ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಮತ್ತು ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸಪಟ್ಟರು.
ಈ ಬಗ್ಗೆ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment