ಮಂಗಳೂರು: ಮಕ್ಕಳ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಆಶ್ರಯದಲ್ಲಿ ನಾಳೆ (ಸೆ.19) ಭಾನುವಾರ ಆನ್‌ಲೈನ್ ಮೂಲಕ ಕವನ ರಚನಾ ಪ್ರೇರಣೆ ಕಮ್ಮಟ ಆಯೋಜಿಸಲಾಗಿದೆ.
ಸಂಜೆ 5ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಕಾಸರಗೋಡಿನ ಹಿರಿಯ ಸಾಹಿತಿ, ನಿವೃತ್ತ ಅಧ್ಯಾಪಕ ವಿ.ಬಿ ಕುಳಮರ್ವ ಅವರು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಸಿ. ಅವರು ಭಾಗವಹಿಸಲಿದ್ದಾರೆ. ಬಂಟ್ವಾಳ ತಾಲೂಕು ಅಡ್ಯನಡ್ಕದ ಜನತಾ ಪ್ರೌಢಶಾಲೆಯ ಶಿಕ್ಷಕರು, ಸಾಹಿತಿಗಳೂ ಆದ ಶಿವಕುಮಾರ ಸಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳನ್ನು ಸುಳ್ಯ ಸೌಮ್ಯ ಸಿ.ಡಿ ದೇವಚಳ್ಳ ಪರಿಚಯಿಸಲಿದ್ದಾರೆ. ಮುಖ್ಯ ಅತಿಥಿಗಳನ್ನು ಸಾತ್ವಿಕ್ ವಿ ನಾಯಕ್ (ಭಾಗವತರು) ಹಾಗೂ ಅಧ್ಯಕ್ಷರನ್ನು ಅಡ್ಯನಡ್ಕದ ಬಲ್ಕೀಸ ಬಾನು ಪರಿಚಯಿಸಲಿದ್ದಾರೆ.
ಬಂಟ್ವಾಳ ಚಂದಳಿಕೆಯ ಸ.ಹಿಪ್ರಾ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಲಾವಣ್ಯ ಕಾಡುಮಠ ಸ್ವಾಗತ, ಬಂಟ್ವಾಳ ಪಡಿಬಾಗಿಲು ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಧನ್ವಿತಾ ಕಾರಂತ್ ಎರುಂಬು ಪ್ರಾರ್ಥನೆ ಹಾಗೂ ಬಂಟ್ವಾಳ ದೇವಿನಗರದ 9ನೇ ತರಗತಿ ವಿದ್ಯಾರ್ಥಿನಿ ನಮಿತಾ ನಿರೂಪಣೆಯನ್ನು ನಿರ್ವಹಿಸಲಿದ್ದಾರೆ.
ಈ ಕಮ್ಮಟ ಗೂಗಲ್ ಮೀಟ್ ಮೂಲಕ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಐದು ನಿಮಿಷ ಮುಂಚಿತವಾಗಿ https://meet.google.com/rrnt-sagk ಲಿಂಕ್ ಮೂಲಕ ಸೇರಿಕೊಳ್ಳಬಹುದು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment