ಬೆಳಗಾವಿ: ಕೃಷಿ ಸಚಿವ ಬಿ.ಸಿ. ಪಾಟೀಲ್, ರೈತರಿಗಾಗಿ ಒಂದು ದಿನ ಕಾರ್ಯಕ್ರಮದಲ್ಲಿ ಹಸುವಿಗೆ ಕಾಳುಗಳನ್ನು ತಿನ್ನಿಸಲು ಹೋಗಿ, ಹಸು ಸಚಿವರ ಮೈಮೇಲೆ ಎಗರಲು ಬಂದ ಘಟನೆಯೊಂದು ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆದಿದೆ.
ಬಿ.ಸಿ. ಪಾಟೀಲ್ ಅವರು ನಿಪ್ಪಾಣಿಯಲ್ಲಿ ರೈತರಿಗಾಗಿ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಬ್ಬಿನ ಗದ್ದೆಯಲ್ಲಿ ಕಬ್ಬು ನಾಟಿ ಮಾಡಿ ಗಮನ ಸೆಳೆದರು.
ಬಳಿಕ ಹಸುವಿಗೆ ದವಸ ತಿನ್ನಿಸಲೆಂದು ತೆರಳಿದಾಗ ಬೆದರಿದ ಹಸು ಸಚಿವರಿಗೆ ತಿವಿಯಲು ಬಂದಿದೆ. ಸ್ಥಳದಲ್ಲಿದ್ದವರೆಲ್ಲಾ ರೈತರು ಗಾಬರಿಗೊಂಡು ಚೆಲ್ಲಾ ಪಿಲ್ಲಿಯಾಗಿ ಓಡಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಗೋವಿನಿಂದ ತಪ್ಪಿಸಿಕೊಂಡು ಹೋದರು.
ಘಟನೆಯಲ್ಲಿ ಹಸು ನಾಲ್ವರಿಗೆ ತಿವಿದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸ್ಥಳದಲ್ಲಿದ್ದವರು ಹರಸಾಹಸಪಟ್ಟು ಹಸುವನ್ನು ಹಿಡಿದಿದ್ದಾರೆ.
إرسال تعليق