ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿರರ್ಗಳ, ಸ್ಪಷ್ಟ ಭಾಷೆಯೇ ಪತ್ರಿಕೋದ್ಯಮದ ಜೀವಾಳ: ಪ್ರಣವ ಕೆ

ನಿರರ್ಗಳ, ಸ್ಪಷ್ಟ ಭಾಷೆಯೇ ಪತ್ರಿಕೋದ್ಯಮದ ಜೀವಾಳ: ಪ್ರಣವ ಕೆ


ಪುತ್ತೂರು: ಪತ್ರಿಕೋದ್ಯಮದಲ್ಲಿ ಭಾಷೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ನಿರರ್ಗಳ ಹಾಗೂ ಸ್ಪಷ್ಟ ಭಾಷೆಯು ಪತ್ರಿಕೋದ್ಯಮದ ಜೀವಾಳ ಎಂದರೆ ತಪ್ಪಾಗದು. ಪತ್ರಕರ್ತರು ಭಾಷೆಯ ಮೇಲೆ ಹಿಡಿತ ಹೊಂದಿರಬೇಕು ಎಂದು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಎಸ್.ಡಿ.ಇ ತರಬೇತುದಾರ ಪ್ರಣವ ಕೆ ತಿಳಿಸಿದರು.


ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಐ.ಕ್ಯು.ಎ.ಸಿ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ಪತ್ರಿಕೋದ್ಯಮದ ಭಾಷೆ: ವಿಶೇಷತೆಗಳು ಮತ್ತು ವ್ಯಾಖ್ಯಾನ' ಎಂಬ ವಿಷಯದ ಕುರಿತು ಆನ್ಲೈನ್ ಮುಖಾಂತರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.


ಪತ್ರಿಕೋದ್ಯಮದಲ್ಲಿ ಸರಳ ಭಾಷೆಯನ್ನು ಬಳಸಬೇಕು. ಪತ್ರಕರ್ತರಲ್ಲಿ ಬರವಣಿಗೆಯ ಸ್ಪಷ್ಟತೆ ಇರಬೇಕು. ದಿನ ಪತ್ರಿಕೆಗಳಲ್ಲಿ ಅಥವಾ ಟಿವಿ ಮಾಧ್ಯಮಗಳಲ್ಲಿ ಶೀರ್ಷಿಕೆಯು ಜನರನ್ನು ಬೇಗನೆ ಆಕರ್ಷಿಸುತ್ತದೆ. ಹೀಗಾಗಿ ಕ್ರಿಯಾತ್ಮಕವಾಗಿ ಶೀರ್ಷಿಕೆಯನ್ನು ರಚಿಸುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದು ನುಡಿದರು.


ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ ಆರ್ ನಿಡ್ಪಳ್ಳಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪನ್ಯಾಸಕಿ ಸೀಮಾ ಪೋನಡ್ಕ ವಂದಿಸಿ, ವಿದ್ಯಾರ್ಥಿನಿ ಸೌಜನ್ಯ ಬಿ ಎಂ ಕೆಯ್ಯೂರು ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post