ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ಲೇಷಣೆ: ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಗೆದ್ದವರ್ಯಾರು? ಸೇೂತವರ್ಯಾರು?

ವಿಶ್ಲೇಷಣೆ: ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಗೆದ್ದವರ್ಯಾರು? ಸೇೂತವರ್ಯಾರು?


ಚಿತ್ರ ಕೃಪೆ: ದಿ ಕ್ವಿಂಟ್‌


ಮೂರು ಮಹಾನಗರ ಪಾಲಿಕೆಗಳಾದ ಬೆಳಗಾವಿ, ಹುಬ್ಬಳ್ಳಿ ಧಾರವಾಡ ಕಲ್ಬುರ್ಗಿಗಳ ಚುನಾವಣೆಗಳ ಫಲಿತಾಂಶ ನೇೂಡುವಾಗ ಒಟ್ಟಾರೆ ಇದು ಉತ್ತರ ಕನಾ೯ಟಕ ಭಾಗದಲ್ಲಿ ರಾಜಕೀಯ ಪಕ್ಷಗಳ ಏಳು ಬೀಳುಗಳ ಲೆಕ್ಕಾಚಾರವನ್ನು ಯಾವ ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು ಅನ್ನುವುದು ಕೂಡಾ ಅಷ್ಟೇ ಕುತೂಹಲದ ಸಂಗತಿ.


ರಾಜ್ಯದಲ್ಲಿ ಅಧಿಕಾರ ರೂಢ ಬಿಜೆಪಿ ಈ ಮೂರು ಪಾಲಿಕೆಗಳಲ್ಲಿ ಅತ್ಯಧಿಕ ಸ್ಥಾನ ಗಳಿಸುವುದರೊಂದಿಗೆ ಅಧಿಕಾರ ಹಿಡಿದೇ ಬಿಟ್ಟೆ ಎಂದು ಬೀಗುತ್ತಿದ್ದರೆ ಕಾಂಗ್ರೆಸ್ ಕಳಪೆ ಪ್ರದಶ೯ನದ ನಡುವೆಯೂ ನಾವು ಸೇೂತಿಲ್ಲ, ನಮಗೆ ಅನುಕೂಲಕರ ವಾತಾವರಣ ಇರಲಿಲ್ಲ ಆದರೂ ನಮ್ಮದು "ಗುಡ್ ನಂಬರ್" ಅಂದುಕೊಂಡು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿಯಲ್ಲಿ ಇದೆ. ಇದು ಕಾಂಗ್ರೆಸ್  ಪಕ್ಷದ ಅಧ್ಯಕ್ಷರ ಮಾತಿನಲ್ಲಿಯೇ ಎದ್ದು ಕಾಣುವಂತಿದೆ. ಜೆಡಿಎಸ್ ಅಂತೂ ಅತಂತ್ರ ಸ್ಥಿತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿತ್ತು ಕೊನೆಗೂ ಅದು ಫಲಿಸಲಿಲ್ಲ ಅನ್ನುವ ವ್ಯಥೆ ಅವರಿಗಿದೆ. ಹಾಗಾದರೆ ಇಲ್ಲಿ ಗೆದ್ದವರಾರು?ಸೇೂತವರಾರು? ಅನ್ನುವ ಲೆಕ್ಕಾಚಾರದಲ್ಲಿ ಕೆಲವೊಂದು ಆಯಾಮಗಳಲ್ಲಿ ಸ್ಥಳೀಯ ಆಡಳಿತದ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸ ಬೇಕಾಗಿದೆ.


1. ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಪಕ್ಷಕ್ಕಿಂತ ಅಭ್ಯರ್ಥಿಗಳಿಗೆ ಮತದಾರರು ಹೆಚ್ಚು ಆದ್ಯತೆ ನೀಡುತ್ತಾರೆ ಅನ್ನುವುದು ಮೊದಲಿನಿಂದಲೂ ಕಂಡು ಕೊಂಡ ಸತ್ಯ. ಹೆಚ್ಚು ಪರಿಚಿತರು ತಮ್ಮ ವಾಡಿ೯ಗೆ ಯಾರು ಸಮಥ೯ರು ಅನ್ನುವ ಮತದಾರರ ನಿಧಾ೯ರವೇ ಪ್ರಮುಖವಾಗುತ್ತದೆ ಹೊರತು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷ ಅಲ್ಲಿ ಪ್ರಮುಖ ಪಾತ್ರವಹಿಸುವುದಿಲ್ಲ ಅನ್ನುವುದು ಮೇಲ್ನೋಟಕ್ಕೆ ಕಾಣುವ ವಾಸ್ತವಿಕತೆ.


2. ಬೆಳಗಾವಿಯ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಒಟ್ಟು 58 ಸ್ಥಾನಗಳಲ್ಲಿ 12 ಮಂದಿ ಪಕ್ಷೇತರರು ಜಯಶಾಲಿಗಳಾಗಿದ್ದಾರೆ ಮಾತ್ರವಲ್ಲ ಕಾಂಗ್ರೆಸ್ ಕೇವಲ 10 ಸ್ಥಾನಗಳಿಗೆ  ತೃಪ್ತಿ ಪಡ ಬೇಕಾದ ಪರಿಸ್ಥಿತಿ ಬಂದಿದೆ ಅಂದರೆ ಜನ ಬಯಸಿರುವುದು ಪಕ್ಷ ಅಲ್ಲ ಬದಲಾಗಿ ಅಭ್ಯರ್ಥಿಗಳ ವೆೈಯಕ್ತಿಕ ವಚ೯ಸ್ಸು ಅನ್ನುವುದನ್ನು ಸಾಬೀತು ಪಡಿಸಿದೆ.


3. ಸ್ಥಳೀಯ ಚುನಾವಣೆಯಲ್ಲಿ ಆಡಳಿತ ರೂಢ ಪಕ್ಷಕ್ಕೆ ಯಾವಾಗಲೂ ಸ್ವಲ್ಪ ಮಟ್ಟಿಗೆ ವಾತಾವರಣ ಪೂರಕವಾಗಿಯೇ ಇರುತ್ತದೆ. ಮಾತ್ರವಲ್ಲ ಬಿಜೆಪಿ ಈ ಬಾರಿ ಹೆಚ್ಚಿನ ಧೂಳು ಎಬ್ಬಿಸುವಲ್ಲಿ ಯಶಸ್ವಿಯಾಗಿದೆ ಅನ್ನುವುದು ಅಷ್ಟೇ ಸತ್ಯ.


4. ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಬಹು ಮುಖ್ಯಕಾರಣ ಈ ಚುನಾವಣೆಯನ್ನು ಸಂಘಟನಾತ್ಮಕವಾಗಿ ತೆಗೆದುಕೊಂಡು ಹೇೂರಾಡುವಲ್ಲಿ ರಾಜ್ಯ ಮಟ್ಟದ ನಾಯಕರು ಎಡವಿದ್ದಾರೆ ಅನ್ನುವುದು ಅಷ್ಟೇ ನಿಜ. ಪಕ್ಷದ ಅಧ್ಯಕ್ಷರು ವಿಪಕ್ಷ ನಾಯಕರ ನಡುವೆ ಮುಸುಕಿನ ಗುದ್ದಾಟ. ಕಲ್ಬುರ್ಗಿಯ ಮಹಾ ನಾಯಕರು ಅನ್ನಿಸಿಕೊಂಡ ಖಗೆ೯ ಸಾಹೇಬ್ರು 2019ರ ಲೇೂಕಸಭಾ ಸೇೂಲಿನ ನೇೂವಿನಿಂದ ಇನ್ನೂ ಹೊರಗೆ ಬಂದಿಲ್ಲ. ಮಾತ್ರವಲ್ಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೂಡಾ ಸಾಕಷ್ಟು ಎಡವಿರುವುದು ಸ್ಥಳೀಯ ನಾಯಕರಗಳ ಭಿನ್ನಮತದಿಂದ ಕಂಡು ಬಂದಿದೆ. ನಿನ್ನೆ ಪಕ್ಷದ ಅಧ್ಯಕ್ಷರ ಬಾಯಿಯಲ್ಲಿ ಬಂದ ಹಾಗೇ ಬೆಳಗಾವಿಯಲ್ಲಿ ನಾವು ಸ್ಪಧಿ೯ಸುವುದೇ ಸಂಶಯವಿತ್ತು. ಈ ಸಂಶಯದಲ್ಲಿಯೇ ಪರೀಕ್ಷೆಗೆ ಕೂತರೆ ಪಾಸಾಗುವುದಾರೂ ಹೇಗೆ ಸಾಧ್ಯ?


5. ಬಿಜೆಪಿಯ ಸರಕಾರದ ರಚನೆಯ ಗೊಂದಲದ ಪರಿಸ್ಥಿತಿಯನ್ನು ಸರಿಯಾಗಿ ಬಳಸಿ ಕೊಳ್ಳುವುದರಲ್ಲಿ ಕಾಂಗ್ರೆಸ್ಸಿನ ವೆೈಫಲ್ಯವೇ ಬಿಜೆಪಿಗೆ ಪ್ಲಸ್ ಆಗಿದೆ ಅನ್ನುವುದು ರಾಜಕೀಯ ವಿಶ್ಲೇಷಕರ ಅಂಬೇೂಣ.


6. ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಬಹುಮುಖ್ಯ ಕಾರಣ ಬಹು ಹಿಂದಿನಿಂದಲೂ ಅವರು ನಂಬಿಕೊಂಡು ಬೆಳೆಸಿಕೊಂಡು ಬಂದ "ಜಾತ್ಯತೀತ" ಮತಗಳು ಕೆೈತಪ್ಪಿ ಹೇೂಗಿದ್ದು. ಈ ಬಾರಿ ಈ ಎಲ್ಲಾ ಮತಗಳನ್ನು ಸಾರಾಸಗಟಾಗಿ ವರ್ಗಾಯಿಸಿಕೊಂಡವರು ಎಐಎಂಐಎಂ. ಪಕ್ಷ ಅನ್ನುವುದು ಬಹುದೊಡ್ಡ ಜಾತ್ಯತೀತ ಪಕ್ಷ ಅನ್ನಿಸಿಕೊಂಡ ಕಾಂಗ್ರೆಸ್‌ಗೆ ಸದ್ಯಕ್ಕೆ ತಲೆ ಎತ್ತಲಾರದ ಹೊಡೆತ. ಇಂದಿನ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಅವರೇ ಬೆಳೆಸಿದ  ಇಂತಹ ತೃತೀಯ ಶಕ್ತಿಗಳೇ ಅವರಿಗೆ ಮುಳುವಾಗತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತು.


ಅಂತೂ ಈ ಬಾರಿಯ ಮೂರು ಪಾಲಿಕಾ ಚುನಾವಣಾ ಫಲಿತಾಂಶಗಳು ಮೂರು ಪಕ್ಷಗಳಿಗೂ ಎಚ್ಚರಿಕೆಯ ಘಂಟೆ ಬಾರಿಸಿರುವುದು ಅಷ್ಟೇ ಸತ್ಯ. ಆಡಳಿತರೂಢ ಪಕ್ಷ ಕೂಡಾ ಗೆದ್ದಿದ್ದೇವೆ ಅಂದು ಬೀಗುವ ಹಾಗೆಯೂ ಇಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಫಲಿತಾಂಶವೇ ಅವರನ್ನು ಆತ್ಮ ವಿಮರ್ಶೆಗೆ ಒಳಪಡಿಸುವಂತಿದೆ. ಅಲ್ಲಿ ಬಿಜೆಪಿ ಏನೊ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಅತಂತ್ರ ಸ್ಥಿತಿ ನಿಮಾ೯ಣವಾಗಿದೆ. ಇಲ್ಲಿನವರೇ ಮುಖ್ಯಮಂತ್ರಿಗಳು ಕೇಂದ್ರ ಸಚಿವರು ಸಂಸರು ಶಾಸಕರು ಇದ್ದರೂ ಮಹಾ ಪಾಲಿಕೆಯನ್ನು ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳಲು ಯಾಕೆ ಸಾಧ್ಯವಾಗಿಲ್ಲ ಅನ್ನುವುದನ್ನು ಕೂಡಾ ಪಕ್ಷ ಗಂಭೀರವಾಗಿ ಆತ್ಮ ಮಂಥನ ಮಾಡಿಕೊಳ್ಳ ಬೇಕಾದ ಸಂದರ್ಭ ಸೃಷ್ಟಿ ಮಾಡಿರುವುದು ಅಷ್ಟೇ ಸತ್ಯ.


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post