ಬೆಂಗಳೂರು ; ಪ್ರೀತಿಸಿದ ಯುವತಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನ ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
31 ವರ್ಷದ ಸಿದ್ಧರಾಮ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಸಿದ್ದರಾಮ್ ಹಾಗೂ ಸುಧಾ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.
ಆದರೆ ನಿನ್ನೆ ಇಬ್ಬರ ಜೊತೆ ಗಲಾಟೆ ನಡೆದಿದ್ದು, ಸುಧಾ ಮದುವೆ ಆಗಲು ಹಿಂದೇಟು ಹಾಕಿದ್ದಾಳೆ. ಅಲ್ಲದೇ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಳು ಎಂಬ ವಿಚಾರ ತಿಳಿದು ಸಿದ್ದರಾಮ್ ಆಘಾತಗೊಂಡಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق