ಬಂಟ್ವಾಳ : ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಾರಣಾಸಿ ಫಾರ್ಮ್ ಹೌಸ್ ನ ಕೆರೆಯಲ್ಲಿ ಮುಳುಗಿ ಯುವ ವೈದ್ಯೆಯೊಬ್ಬರು ಮೃತಪಟ್ಟಿರುವ ಘಟನೆಯೊಂದು ವರದಿಯಾಗಿದೆ.
ಮೃತರನ್ನು ಮಂಗಳೂರು ಮೂಲದ ವೈದ್ಯೆ ಡಾ.ಮೈಜಿ ಕರೋಲ್ ಫೆರ್ನಾಂಡಿಸ್ (31 ವರ್ಷ) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಡಾ.ಮೈಜಿ ಬುಧವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಷಿ ಅಧ್ಯಯನದ ಬಗ್ಗೆ ಆಸಕ್ತಿ ಹೊಂದಿದ್ದ ಡಾ.ಮೈಜಿ ಅವರು ಅಡ್ಯನಡ್ಕಕ್ಕೆ ಅಧ್ಯಯನಕ್ಕೆಂದು ತೆರಳಿದ್ದರೆನ್ನಲಾಗಿದೆ.
ಮಂಗಳವಾರ ಸಂಜೆ ಯಾರು ಇಲ್ಲದ ಸಮಯ ಫಾರ್ಮ್ ಹೌಸ್ ನಲ್ಲಿದ್ದ ಕೆರೆಯಲ್ಲಿ ಈಜಲು ಹೋದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರೆನ್ನಲಾಗಿದೆ.
ಆ ಬಳಿಕ ಇವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Post a Comment