ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಡಪದವು ಶ್ರೀರಾಮ ಆಟೋ ರಿಕ್ಷಾ ಸ್ಟ್ಯಾಂಡ್‌ಗೆ ಮೇಲ್ಚಾವಣಿಯ ವ್ಯವಸ್ಥೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅನುಷ್ಟಾನಗೊಂಡಿದ್ದು, ಶಾಸಕರಾದ ವೈ ಭರತ್ ಶೆಟ್ಟಿಯವರು ಅದನ್ನು ಬುಧವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಜನಾರ್ಧನ ಗೌಡ, ಎಡಪದವು ಗ್ರಾಮ ಪಂಚಾಯತಿ ಅಧ್ಯಕ್ಷ ಸುಕುಮಾರ್, ಉಪಾಧ್ಯಕ್ಷೆ ಪ್ರೇಮ, ಎಡಪದವು ಮಹಾಶಕ್ತಿ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಎಂ, ಶಕ್ತಿಕೇಂದ್ರ ಪ್ರಮುಖರಾದ ರಾಮಚಂದ್ರ ಪೂಜಾರಿ ಶ್ರೀರಾಮಮಂದಿರದ ಅಧ್ಯಕ್ಷರಾದ ಮುರಳಿಧರ್ ಶೆಟ್ಟಿ, ಕೃಷ್ಣ ಅಮೀನ್, ಮಾಧವ ಶೆಣೈ, ಆಟೋರಿಕ್ಷಾ ಮಾಲಕರ ಸಂಘದ ಅಧ್ಯಕ್ಷ ಜಯಂತ್ ಪೂಜಾರಿ, ಶರತ್ ಜಯಶೀಲ ನಾಯಕ್, ಕುಶಾಲ್ ಕುಮಾರ್, ಹರೀಶ್ ಕೊಟ್ಟಾರಿ, ರಿಕ್ಷಾ ಚಾಲಕರು, ಮಾಲಕರು, ಗ್ರಾಮ ಪಂಚಾಯತ್ ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖ್, ಸಹಪ್ರಮುಖ್, ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment