ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೊಳ್ಳೆಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರಧಾರಿಗಳು: ಡಾ. ಈಶ್ವರ ಪ್ರಸಾದ್

ಸೊಳ್ಳೆಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರಧಾರಿಗಳು: ಡಾ. ಈಶ್ವರ ಪ್ರಸಾದ್



ಪುತ್ತೂರು: ಹಲವರ ಮನಸ್ಸಿನಲ್ಲಿ ಸೊಳ್ಳೆಗಳು ಶೂನ್ಯೋಪಯೋಗಿ ಜೀವಿಗಳು ಎಂಬ ಅನಿಸಿಕೆಯಿದೆ. ಆದರೆ ಅವು ಪ್ರಕೃತಿ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಗಮನಾರ್ಹ ವಿಷಯ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಪ್ರಸಾದ್ ಹೇಳಿದರು.


ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್, ಪ್ರಾಣಿಶಾಸ್ತ್ರ ವಿಭಾಗ, ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ‘ಸೊಳ್ಳೆಗಳ  ಲೋಕ’ ಎಂಬ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶನಿವಾರ ಅವರು ಮಾತನಾಡಿದರು. 


ಸೊಳ್ಳೆಗಳ ಕುರಿತು ಸಂಶೋಧನೆಯನ್ನು ಹೇಗೆ ಮಾಡಬಹುದು ಎಂಬ ಕುರಿತಾಗಿ ಮಾಹಿತಿ ನೀಡಿದ ಅವರು, ಅವುಗಳ ಪ್ರಭೇದಗಳನ್ನು ಗುರುತಿಸುವ ಪರಿಯನ್ನು ತಿಳಿಸಿದರು. ಈ ಕೀಟಗಳು ಇತರ ಅನೇಕ ಪ್ರಾಣಿಗಳಿಗೆ ಪ್ರಮುಖ ಆಹಾರ ಮೂಲವಾಗಿರುವುದರಿಂದ ಹಾಗೂ ಮಕರಂದವನ್ನು ಹೀರುವ ಪ್ರಕ್ರಿಯೆಯಲ್ಲಿ ಸಸ್ಯಗಳನ್ನು ಪರಾಗಸ್ಪರ್ಶ ಮಾಡುವುದರಿಂದ ಇವು ಪರಿಸರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುತ್ತವೆ ಎಂದು ತಿಳಿಸಿದರು.


ಐಕ್ಯೂಎಸಿ ಸಂಯೋಜಕರಾದ ಪ್ರೊ. ಶಿವಪ್ರಸಾದ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಥಮ ಬಿ.ಝಡ್.ಸಿ. ವಿದ್ಯಾರ್ಥಿ ಸ್ವಾತಿ ಸ್ವಾಗತಿಸಿ ಹಾಗೂ ಅನುಷ ಪಿ. ವಂದಿಸಿದರು. ದ್ವಿತೀಯ ಬಿ.ಝಡ್.ಸಿ. ವಿದ್ಯಾರ್ಥಿನಿ ನಿಶಿತಾ ಪ್ರಕಾಶ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಶ್ರೀಲಹರಿ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





0 تعليقات

إرسال تعليق

Post a Comment (0)

أحدث أقدم