ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಿ ಕಾಲೇಜು: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕರ್ನಲ್ ಎನ್. ಶರತ್ ಭಂಡಾರಿ

ವಿವಿ ಕಾಲೇಜು: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕರ್ನಲ್ ಎನ್. ಶರತ್ ಭಂಡಾರಿ

 



ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ (ರಿ) ದ ನೂತನ ಅಧ್ಯಕ್ಷರಾಗಿ ಕರ್ನಲ್ ಎನ್. ಶರತ್ ಭಂಡಾರಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. 16  ಮಂದಿ ಕಾರ್ಯಕಾರಿ ಸಮಿತಿ  ಸದಸ್ಯರ ಆಯ್ಕೆಯ ಬಳಿಕ ನಡೆದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ 2021-22  ಮತ್ತು 2022-23 ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


ಗೌರವಾಧ್ಯಕ್ಷರಾಗಿ ಡಾ. ಎಂ ವೀರಪ್ಪ ಮೊಯಿಲಿ, ಅಧ್ಯಕ್ಷರಾಗಿ ಕರ್ನಲ್ ಎನ್. ಶರತ್ ಭಂಡಾರಿ, ಉಪಾಧ್ಯಕ್ಷರಾಗಿ ರಾಮದಾಸ್ ಗೌಡ ಎಸ್, ಲೋಹಿದಾಸ್ ಆರ್, ಕಾರ್ಯದರ್ಶಿಯಾಗಿ ಯು. ಮೋಹನ ರಾವ್, ಜೊತೆ ಕಾರ್ಯರ್ಶಿಯಾಗಿ ವಿಶ್ವನಾಥ್ ಶೆಟ್ಟಿ ಜೆ, ಕೋಶಾಧಿಕಾರಿಯಾಗಿ ಡಿ. ಶ್ರೀನಿವಾಸ ನಾಯ್ಕ್ ಆಯ್ಕೆಯಾಗಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم