ಬೆಂಗಳೂರು: ಹಿಂದಿನ ವರ್ಷದಲ್ಲಿ ಈರುಳ್ಳಿ ದರ ಗಗನಕ್ಕೇರಿದ್ದು ಇದೀಗ ಈರುಳ್ಳಿ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ಕೊಳೆ ರೋಗದಿಂದಾಗಿ ಈರುಳ್ಳಿ ಬೆಳೆ ಕಡಿಮೆಯಾಗಿದೆ. ಹೆಚ್ಚಿನ ಭಾಗದಲ್ಲಿ ಬಂದಿರುವ ಫಸಲು ಗುಣಮಟ್ಟ ಕುಸಿತದಿಂದ ದರ ಕೂಡ ಕಡಿಮೆಯಾಗಿದೆ.
ಸಣ್ಣ ಗಾತ್ರದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ಕೆಜಿಗೆ ಒಂದು ರೂಪಾಯಿ ದರ ಇದೆ. ಈರುಳ್ಳಿ ಸರಿಯಾದ ಬೆಲೆಗೆ ಸಿಗದೆ ಕಂಗಾಲಾದ ರೈತರು ಈರುಳ್ಳಿಯನ್ನು ರಸ್ತೆ, ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೆಲವರು ಹೊಲದಲ್ಲೇ ಬೆಳೆ ಬಿಟ್ಟಿದ್ದಾರೆ. ಕೊಳೆರೋಗದಿಂದ ಈರುಳ್ಳಿ ಗಾತ್ರ ಸಣ್ಣದಾಗಿದೆ. ಮಾರುಕಟ್ಟೆಯಲ್ಲಿ ಇಂತಹ ಈರುಳ್ಳಿಗೆ ಬೇಡಿಕೆ ಇಲ್ಲದಂತಾಗಿದೆ.
ಆದರೆ, ದೊಡ್ಡ ಗಾತ್ರದ ಈರುಳ್ಳಿ ದರ ಕಡಿಮೆಯಾಗಿಲ್ಲ. ಗ್ರಾಹಕರಿಗೆ ಹಿಂದಿನ ದರಗಳಲ್ಲಿಯೇ ಈರುಳ್ಳಿ ಮಾರಾಟವಾಗುತ್ತಿದೆ ಎನ್ನಲಾಗಿದೆ.
Post a Comment