ಹಾಸನ: ಕಾರಿನಲ್ಲಿ ಬಂದ ಹಂತಕರು ಹಾಸನದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಿದ್ದು, ಮಹಿಳೆಯನ್ನು ಕೊಚ್ಚಿ ಹತ್ಯೆ ಮಾಡಿದ್ದಾರೆ. ಹಾಸನ ತಾಲ್ಲೂಕಿನ ಹನುಮಂತಪುರ ದಲ್ಲಿ ಘಟನೆ ನಡೆದಿದೆ.
ಗೌರಮ್ಮ(55 ವರ್ಷ) ಕೊಲೆಯಾಗಿದ್ದು, ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆ ಮೇಲೆ ದಾಳಿಯಾಗಿದೆ.
ಗುರುವಾರ ಸಂಜೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಹಿಳೆಯ ಮೇಲೆ ಕೃತ್ಯ ಎಸಗಿದೆ. ಕೆಲ ವರ್ಷಗಳ ಹಿಂದೆ ಕೊಲೆಗೆ ಸುಫಾರಿ ಕೇಸ್ ಒಂದರಲ್ಲಿ ಮಹಿಳೆ ಜೈಲು ಸೇರಿದ್ದಳು. ಜೈಲು ವಾಸದ ಬಳಿಕ ಬಿಡುಗಡೆ ಆಗಿದ್ದ ಮಹಿಳೆ ಒಂಟಿಯಾಗಿ ವಾಸ ಮಾಡುತ್ತಿದ್ದಳು.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸಗೌಡ , ಎಎಸ್ಪಿ ನಂದಿನಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಹಂಚಿಕೊಂಡಿದೆ.
Post a Comment