ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ಟ್ಯಾಲಿ ಇಅರ್‌ಪಿ9 (ಜಿಎಸ್‌ಟಿ)’ ತರಬೇತಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ಟ್ಯಾಲಿ ಇಅರ್‌ಪಿ9 (ಜಿಎಸ್‌ಟಿ)’ ತರಬೇತಿ

ಹೊಸ ವಿಷಯಗಳಿಗೆ ಒಗ್ಗಿಕೊಳ್ಳಲು ತಿಳಿದಿರಬೇಕು: ಮುರಳಿಕೃಷ್ಣ ಕೆ ಎನ್




ಪುತ್ತೂರು: ದೇಶ ಅಭಿವೃದ್ಧಿಯಾಗಲು ಶಿಕ್ಷಣ ಕೌಶಲ್ಯ ಅತ್ಯಗತ್ಯ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಿದ್ದರೂ ಅದನ್ನು ಪೂರ್ತಿಯಾಗಿ ಅನುಷ್ಟಾನಗೊಳಿಸಲು ಸಾಧ್ಯವಾಗಿಲ್ಲ. ಇಂದಿನ ಸರ್ಕಾರ ವಿದ್ಯಾರ್ಥಿಗಳ ಪರವಾಗಿ ಶಿಕ್ಷಣವಿರಬೇಕು ಅನ್ನುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ಮಾಡಲು ಪ್ರಸ್ತಾಪಿಸಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಹೇಳಿದರು.


ಅವರು ಕಾಲೇಜಿನ ಐಕ್ಯೂಎಸಿ, ಉದ್ಯೋಗ ಮತ್ತು ತರಬೇತಿ ಘಟಕ, ವಾಣಿಜ್ಯಶಾಸ್ತ್ರ ಹಾಗೂ ವ್ಯವಹಾರ ಆಡಳಿತ ವಿಭಾಗಗಳ ಆಶ್ರಯದಲ್ಲಿ ನಡೆದ 30 ದಿನಗಳ ‘ಟ್ಯಾಲಿ ಇಅರ್‌ಪಿ9’ ತರಬೇತಿಯ ಪ್ರಮಾಣಪತ್ರ ವಿತರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.


ಶಿಕ್ಷಣ ಲಭ್ಯವಿದ್ದರೂ ವಿದ್ಯಾರ್ಥಿಗಳಿಗೆ ಬೇಕಾದ ವಿಷಯಗಳನ್ನು ಕಲಿಯಲು ಸಾದ್ಯವಾಗುತ್ತಿರಲಿಲ್ಲ. ಪದವಿ ಮುಗಿಸಿ ಹೋಗುವಾಗ ತಾನು ಕಲಿತ ವಿಷಯ ಮುಂದೆ ಉಪಯೋಗ ಬರುವಂತಿರಬೇಕು. ಕಲಿತಿರುವ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಉದ್ಯೋಗ ಸಿಗಬೇಕಾದರೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ನಿರಂತರ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಹೊಸ ವಿಷಯಗಳಿಗೆ ಒಗ್ಗಿಕೊಳ್ಳಲು ತಿಳಿದಿರಬೇಕು ಎಂದು ನುಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್, ಕಲಿಕೆಯ ಜೊತೆಗೆ ಕೌಶಲ್ಯ ವರ್ಧನೆಗೆ ಸರ್ಟಿಫಿಕೇಟ್ ಕೋರ್ಸ್‌ಗಳ ಅವಶ್ಯಕತೆಯನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


ಈ ಸಂದರ್ಭ ‘ಟ್ಯಾಲಿ ಇಅರ್‌ಪಿ9’ ತರಬೇತಿದಾರರಾದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕಿ ದೀಪಿಕಾ, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ವಿನುತ, ಉಪಸ್ಥಿತರಿದ್ದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ರವಿಕಲಾ ವಂದಿಸಿ, ‘ಟ್ಯಾಲಿ ಇಅರ್‌ಪಿ9’ ತರಬೇತಿದಾರರಾದ ಕಾಲೇಜಿನ ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post