ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ

ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ

 


ಶ್ರೀರಂಗಪಟ್ಟಣ:  ಇಲ್ಲಿನ ಮೈಸೂರು ಬೆಂಗಳೂರು ಹೆದ್ದಾರಿ ಬದಿಯಲ್ಲಿರುವ ಅಂಗಡಿ ಗಳ ಬೀಗ ಮುರಿದು ದುಷ್ಕರ್ಮಿಗಳು ತಡರಾತ್ರಿ ಸರಣಿ‌ ಕಳ್ಳತನ‌ ನಡೆದಿದೆ.


ಶ್ರೀರಂಗಪಟ್ಟಣದ KSRTC ಬಸ್ ನಿಲ್ದಾಣದ ಸಮೀಪವಿರುವ ಕೆಲವು ಅಂಗಡಿಗಳ ಬೀಗ ಮುರಿದು ಅಂಗಡಿಯಲ್ಲಿದ್ದ ಪದಾರ್ಥಗಳು ಸೇರಿದಂತೆ ನಗದನ್ನು ಕಳ್ಳತನ‌ ಮಾಡಿದ್ದು ಮೈಸೂರು ಬೆಂಗಳೂರು ಹೆದ್ದಾರಿ ಸಮೀಪದಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಇದೀಗ ಪಟ್ಟಣದಲ್ಲಿ ಆತಂಕ ಮೂಡಿಸಿದೆ‌.


ಈ ಬಗ್ಗೆ ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಅಕ್ಕಪಕ್ಕದ ಅಂಗಡಿಯ ಸಿಸಿಟಿವಿ ಹಾರ್ಡ್ ಡಿಸ್ಕ್ ಯನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments

Post a Comment

Post a Comment (0)

Previous Post Next Post