ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಾಲಾ ಬಸ್ ಕ್ಯಾಂಟರ್ ಗೆ ಡಿಕ್ಕಿ ;ವಿದ್ಯಾರ್ಥಿ ಯ ಕೈ ಕಟ್, ಮೂವರಿಗೆ ಗಾಯ

ಶಾಲಾ ಬಸ್ ಕ್ಯಾಂಟರ್ ಗೆ ಡಿಕ್ಕಿ ;ವಿದ್ಯಾರ್ಥಿ ಯ ಕೈ ಕಟ್, ಮೂವರಿಗೆ ಗಾಯ



ಹಮ್ಜಾಪುರ; ಶಾಲಾ ಬಸ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬನ ಒಂದು ಕೈ ಕಟ್ ಆಗಿದ್ದು, ಮೂವರು ಗಾಯಗೊಂಡಿರುವ ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಹಮ್ಜಾಪುರ ಗ್ರಾಮದ ಬಳಿ ಸಂಭವಿಸಿದೆ.


ಫತೇಹಾಬಾದ್ ನ ಶಾಲಾ ಬಸ್ ರತಿಯಾದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ಬರುತ್ತಿತ್ತು.


ಹಮ್ಜಾಪುರ ಗ್ರಾಮದ ಬಳಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ಗೆ ಬಸ್ ಡಿಕ್ಕಿ ಹೊಡೆದಿದ್ದು, ಅಮನ್ ಎಂಬ 12 ನೇ ತರಗತಿ ವಿದ್ಯಾರ್ಥಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ.


ಕ್ಯಾಂಟರ್ ಶಾಲಾ ಬಸ್ಸಿಗೆ ಡಿಕ್ಕಿಯಾದಾಗ, ವಿದ್ಯಾರ್ಥಿಯ ಮೊಣಕೈ ಕಿಟಕಿಯ ಹೊರಗೆ ಇತ್ತು. ಹೀಗಾಗಿ ಅಪಘಾತದಲ್ಲಿ ಆತನ ಕೈ ತುಂಡಾಗಿದೆ.


 ಹಾಗೆ ಅಪಘಾತದ ವೇಗಕ್ಕೆ ವಾಹನದ ಕಿಟಕಿ ಗಾಜುಗಳು ಒಡೆದಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 


ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

0 تعليقات

إرسال تعليق

Post a Comment (0)

أحدث أقدم