ಸಾರ್ "ಒಳ್ಳೆ ಮಾರ್ಕ್ಸ್ ತೆಗ್ದಿದಾಳೆ, ಆದರೆ ಈ ಸಲ ಓದಿಸೋದು ಕಷ್ಟ ಸಾರ್. ಕರೋನಾದಿಂದ ಬದುಕು ಬಹಳ ಸಂಕಷ್ಟವಾಗಿದೆ. ಮಕ್ಕಳಿಗೆ ಎಜ್ಯುಕೇಶನ್ ಕೊಡುವುದೇ ಕಷ್ಟ ಅನಿಸಿದೆ". ಹೀಗೆ ಹೇಳುವ ಅನೇಕರ ಒಡಲಾಳದ ಸಂಕಷ್ಟಗಳನ್ನು ಇತ್ತೀಚೆಗೆ ಕೇಳುತಿದ್ದೇನೆ. ಮಾರ್ಕ್ಸ್ ತೆರೆದು ನೋಡಿದರೆ ಎಂಭತ್ತು, ತೊಂಭತ್ತರ ಗಡಿಯಲ್ಲಿ ಇದೆ. ಹೌದು, ಈ ಬಾರಿ ಲಾಕ್‌ಡೌನ್ ಎಫೆಕ್ಟ್ ಪ್ರತಿಭಾನ್ವಿತ ಮಕ್ಕಳ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ಮೊದಲೆಲ್ಲ ಅನ್ನದಾನ ಶ್ರೇಷ್ಠ ಎನ್ನುತ್ತಿದ್ದರು, ಈಗ ಒಂದು ಹಂತಕ್ಕೆ ತುತ್ತು ಅನ್ನಕ್ಕಾಗಿ ಪರದಾಟ ಕಡಿಮೆ ಆಗಿರಬಹುದು. ಆದರೆ ಪ್ರಸಕ್ತ ಪ್ರಪಂಚದಲ್ಲಿ ವಿದ್ಯಾದಾನ ಶ್ರೇಷ್ಠ ಎನಿಸಿದೆ. ಅರ್ಹ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಕನಿಷ್ಠ ಡಿಗ್ರಿ ಎಜ್ಯುಕೇಶನ್ ಸಿಗುವಂತಾದರೆ, ಅವರ ಬದುಕಿನ ಪಯಣ ಸಾಂಗವಾಗಿ ಸಾಗುವಂತಾಗುತ್ತದೆ.
ಆ ನಿಟ್ಟಿನಲ್ಲಿ ಇದೊಂದು ಪ್ರಯತ್ನ. ಅನೇಕ ಜಾತಿ ಸಂಘಟನೆಗಳು ಅವರದೇ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಲೆ ಬಂದಿದೆ, ಆದರೆ ಹೆಚ್ಚಿನದು ಅನೇಕ ವಿದ್ಯಾರ್ಥಿಗಳ ಸಂಪರ್ಕಕ್ಕೆ ದೊರಕುತ್ತಿಲ್ಲ. ಅಂತಹ ಸ್ಕಾಲರ್‌ಶಿಪ್‌ಗಳಿದ್ದರೆ ನನಗೊಂದು ವಿಷಯ ತಿಳಿಸಿ. ಹಾಗೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವ, ಸ್ಕಾಲರ್‌ಶಿಪ್ ನೀಡುವ, ಸಂಘ ಸಂಸ್ಥೆಗಳು ನಿಮ್ಮ ಗಮನದಲ್ಲಿ ಇದ್ದರೆ ನನಗೊಂದು ಮೆಸೆಜ್ ಹಾಕಿಬಿಡಿ, ಪ್ಲೀಸ್. ಅದೆಲ್ಲವು ಅರ್ಹ ಮಕ್ಕಳನ್ನು ತಲುಪುವಂತಾದರೆ ನೀವು ಆ ಪುಣ್ಯದಲ್ಲಿ ಭಾಗಿಗಳು. ಅಗತ್ಯವಿದ್ದರಿಗೆ ತಲುಪಿದರೆ ಒಂದು ಸಾರ್ಥಕತೆ ನಮ್ಮೆಲ್ಲರದ್ದು.
-ನಾಗರಾಜ್ ನೈಕಂಬ್ಳಿ 9741474255.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment