ಉಜಿರೆ: ತರಬೇತಿಯ ಸಮಾರೋಪ ನಿಜ ಅರ್ಥದಲ್ಲಿ ಮುಂದೆ ಕೈಗೊಳ್ಳಲಿರುವ ನಿಮ್ಮ ಯೋಜನೆಯ ಆರಂಭಕ್ಕೆ ಮೊದಲ ಹೆಜ್ಜೆ ಎಂದು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿ ವೀರುಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ರುಡ್‍ಸೆಟ್ ಸಂಸ್ಥೆ ಉಜಿರೆಯಲ್ಲಿ ಕಳೆದ 30 ದಿನಗಳಿಂದ ನಡೆದ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕೈಗೊಳ್ಳುವ ವ್ಯವಹಾರದಲ್ಲಿ ನಿಮ್ಮದೇ ಆದ ವಿಶೇಷತೆಯನ್ನು ಅಳವಡಿಸಿಕೊಂಡಲ್ಲಿ ಗ್ರಾಹಕರನ್ನು ಆಕರ್ಷಿಸಿಕೊಳ್ಳಬಹುದು ಎಂಬ ಕಿವಿಮಾತು ನೀಡಿದರು.
ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ ಕಲ್ಲಾಪುರ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತರಬೇತಿಯ ಪೂರ್ಣ ಪ್ರಮಾಣದ ಬಳಕೆ ಕಾರ್ಯಕ್ಷೇತ್ರದಲ್ಲಿ ಆದಾಗ ತರಬೇತಿ ಯಶಸ್ವಿಯಾಗುತ್ತದೆ ಎಂದು ಕರೆ ನೀಡಿದರು.
ಅಬ್ರಹಂ ಜೇಮ್ಸ್, ಹಿರಿಯ ಉಪನ್ಯಾಸಕರು ರುಡ್ ಸೆಟ್ ಸಂಸ್ಥೆ ಸ್ವಾಗತಿಸಿ ತರಬೇತಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಉಪನ್ಯಾಸಕಿ ಶ್ರೀಮತಿ ಅನಸೂಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ತರಬೇತಿಯಲ್ಲಿ ಒಟ್ಟು 34 ಜನ ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment