ಮಂಗಳೂರು: ಇತ್ತೀಚೆಗೆ ರೈಲ್ವೇ ಅಪಘಾತದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಒಬ್ಬ ಪ್ರಾಣಿಪ್ರೇಮಿ ಯುವಕನ ಚಿಕಿತ್ಸೆಗಾಗಿ ರೋಟರಿ ಕ್ಲಬ್ ಮಂಗಳೂರು ಹಿಲ್ ಸೈಡ್ ಇದರ ಚಾರಿಟೇಬಲ್ ಟ್ರಸ್ಟಿನ ಮೂಲಕ ರೂ.55,000/-ದಷ್ಟು ಆರ್ಥಿಕ ಸಹಾಯವನ್ನು ನೀಡಲಾಯಿತು.
ರೋಟರಿ ಅಧ್ಯಕ್ಷ ರೊ.ಪ್ರವೀಣಚಂದ್ರ ಶರ್ಮ, ರೋಟರಿ ಚಾರಿಟಿ ಟ್ರಸ್ಟಿನ ಅಧ್ಯಕ್ಷ ರೊ.ಸುರೇಶ್ ಕಿಣಿ, ಕಾರ್ಯದರ್ಶಿ ರೊ.ಮನೀಶ್ ರಾವ್, ರೊ.ರಂಗನಾಥ ಕಿಣಿ, ರೊ.ಗಣೇಶ ಕಾಮತ್, ರೊ.ಸಾಗರ್ ಪಟೇಲ್ ಹಾಗೂ ರೊ.ಕಿರಣ್ ಕುಮಾರ್ ಭಾಗವಹಿಸಿದರು.
ಚೇತನ್ ಕುಮಾರ್ ಎಂಬ ಈ ಯುವಕನು ತನ್ನ ಬಸ್ ಕ್ಲೀನರ್ ಕೆಲಸಕ್ಕೆ ಬೆಳಿಗ್ಗೆ ಜೋಕಟ್ಟೆ ಯ ಮನೆಯಿಂದ ಹೊರಟಾಗ, ರೈಲ್ವೆ ಹಳಿಯಲ್ಲಿ ಒಂದು ಆಡಿನ ಮರಿ ಸಿಲುಕಿರುವುದನ್ನು ಕಂಡು ಆ ಆಡಿನ ಮರಿಯ ಜೀವವನ್ನು ಕಾಪಾಡಲು ಹೋಗಿ ತನ್ನ ಜೀವವನ್ನು ಅಪಾಯಕ್ಕೆ ತಂದುಕೊಂಡಿದ್ದಾನೆ, ಆಡಿನ ಮರಿಯನ್ನು ಕಾಪಾಡುವಾಗ ಅಕಸ್ಮಾತ್ ಆಗಿ ಬಂದಂತ ರೈಲು ತನ್ನ ಕಾಲಮೇಲೆ ಚಲಿಸಿ ಎರಡೂ ಕಾಲುಗಳನ್ನು ತುಂಡರಿಸಿ ಕೊಂಡು ಹೋಗಿದೆ. ಸದ್ಯ ಎಜೆ ಆಸ್ಪತ್ರೆಯ ವೈದ್ಯರು ಈತನ ಕಾಲನ್ನು ಉಳಿಸಲು ತಮ್ಮೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق