ಬೆಂಗಳೂರು: ನಗರದಲ್ಲಿನ ರಸ್ತೆ ಹೊಂಡಗಳಿಂದ ಸಾವಿರ ಕನಸು ಕಂಡಿದ್ದ ಯುವಕ ಶಿರಸಿಯಿಂದ ಬೆಂಗಳೂರಿಗೆ ಬಂದಿದ್ದ ಇದೀಗ ರಸ್ತೆ ಗುಂಡಿಗೆ ಬಲಿಯಾಗಿದ್ದಾನೆ.
ಈ ಘಟನೆ ನಡೆದಿರುವುದು ರಾಜ್ ಕುಮಾರ್ ಸಮಾಧಿ ರಸ್ತೆ ಬಳಿ. ಮನೋಜ್ ಮೃತ ದುರ್ದೈವಿ.
ಮನೋಜ್ ಎಂದಿನಂತೆ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದು, ರಾಜ್ ಕುಮಾರ್ ಸಮಾಧಿ ಬಳಿ ಹೋಗುತ್ತಿದ್ದಾಗ ರಸ್ತೆ ಗುಂಡಿ ಸಿಕ್ಕಿದೆ.
ಅದನ್ನು ತಪ್ಪಿಸಲು ಹೋದಾಗ, ಹಿಂದೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಮನೋಜ್ ಕೆಳಗೆ ಬಿದ್ದಿದ್ದಾರೆ.
ಈ ಅಪಘಾತದ ಪರಿಣಾಮ ಮನೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೋಜ್ ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.
Post a Comment