ಕಾಸರಗೋಡು, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಕರಾವಳಿ ಜಿಲ್ಲೆಗಳಲ್ಲಿ ಗಮಕ ಕಲೆಯ ವಾಚನ ವ್ಯಾಖ್ಯಾನಗಳನ್ನು ಮಾಡುತ್ತಿರುವ ಕಲಾವಿದರ ಮಾಹಿತಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿಶ್ಚಯಿಸಲಾಗಿದೆ. ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಈ ಮಹತ್ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿರುವರು.
ಈ ನಿಟ್ಟಿನಲ್ಲಿ ಹತ್ತು ವರ್ಷಗಳ ಹಿಂದೆಯೇ ಒಂದು ಪ್ರಕಟಣೆಯನ್ನು ಹೊರಡಿಸಿದ್ದೆವು. ಹಲವು ಜನ ಗಮಕ ವಾಚನ- ವ್ಯಾಖ್ಯಾನ ಕಲಾವಿದರು ಈಗಾಗಲೇ ತಮ್ಮ ಪರಿಚಯ ಪತ್ರವನ್ನು ಭಾವಚಿತ್ರ ಸಹಿತವಾಗಿ ನಮಗೆ ತಲಪಿಸಿದ್ದಾರೆ. ಇದೀಗ ತಲಪಿಸಲು ಬಾಕಿ ಉಳಿದ ಗಮಕ ಕಲಾವಿದರು ಭಾವಚಿತ್ರ ಸಹಿತ ತಮ್ಮ ಪರಿಚಯ ಪತ್ರವನ್ನು ತಾ 20-9- 2021 ರ ಮೊದಲು ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಥವಾ ಕಾರ್ಯದರ್ಶಿ ವಿ.ಬಿ.ಕುಳಮರ್ವ, ಇವರಿಗೆ ತಲುಪಿಸ ಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಮಕ ಕಲಾವಿದರು ಎಲೆಮರೆಯ ಕಾಯಿಯಂತೆ ಬೆಳಕಿಗೆ ಬಾರದಿರುವ ಹಾಗೂ ತಮಗೆ ತಿಳಿದಿರುವ ಗತಿಸಿ ಹೋಗಿರುವ ಗಮಕಿಗಳ ಮಾಹಿತಿಗಳನ್ನು ನೀಡಿ ಸಹಕರಿಸಬೇಕು. ಹೆಚ್ಚಿನ ವಿವರಗಳಿಗೆ 9746631456 ಅಥವಾ 9446484585 ಮೊಬೈಲ್ ನಂಬ್ರಗಳನ್ನು ಸಂಪರ್ಕಿಸ ಬಹುದು.
إرسال تعليق