ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೇಡಿಯಾಲಜಿ ತಜ್ಞ ಡಾ. ಎನ್.ಕೆ. ಶ್ರೀನಿವಾಸ ಮೂರ್ತಿ ನಿಧನ

ರೇಡಿಯಾಲಜಿ ತಜ್ಞ ಡಾ. ಎನ್.ಕೆ. ಶ್ರೀನಿವಾಸ ಮೂರ್ತಿ ನಿಧನ


 

ಬೆಂಗಳೂರು: ಜಯನಗರ ಮತ್ತು ಮಲ್ಲೇಶ್ವರಂ ಕೆ.ಸಿ. ಜನರಲ್ ಆಸ್ಪತ್ರೆ ಹಾಗೂ ರಾಜಾಜಿನಗರ ಇ. ಎಸ್. ಐ. ಆಸ್ಪತ್ರೆಗಳಲ್ಲಿ ರೇಡಿಯಾಲಜಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಶ್ರೀನಿವಾಸ ಮೂರ್ತಿಯವರು ತಮ್ಮ 91 ನೇ ವಯಸ್ಸಿನಲ್ಲಿ ಬೆಂಗಳೂರಿನ ಬಿ.ಟಿ.ಎಂ. ನಲ್ಲಿನ ಸ್ವಗೃಹದಲ್ಲಿ ಸೆ.20ರಂದು ನಿಧನರಾದರು.


ನರಸಿಂಹರಾಜಪುರ ಮೂಲದವರಾದ ಶ್ರೀಯುತರು ವಿಶ್ವ ಆರೋಗ್ಯ ಸಂಸ್ಥೆಯಿಂದ ಕರ್ನಾಟಕದಿಂದ ಆಯ್ಕೆಯಾಗಿ 1972ರಲ್ಲಿ ಬಿಹಾರದ ಮುಜಾಫರ್ ನಗರ್ ಜಿಲ್ಲೆಯಲ್ಲಿ ಸಿಡುಬು ನಿಯಂತ್ರಣ ಕಾರ್ಯದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು.


ನಿವೃತ್ತಿಯ ನಂತರ ಆಧ್ಯಾತ್ಮಕ್ಕೆ ಹೊರಳಿದ ಮೂರ್ತಿಯವರು ಆಂತರಿಕ ಶಕ್ತಿ ಮತ್ತು ಸ್ವಾಸ್ಥ್ಯ ಸಮತೋಲನ ಕುರಿತು ವಿವಿಧ ಸಂಘ ಸಂಸ್ಥೆಗಳಲ್ಲಿ ಅನುಭವಜನ್ಯ ಉಪನ್ಯಾಸ ನೀಡಿದ್ದಾರೆ. ಮೃತರು ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post