ಪೆರ್ಲ: ಟ್ಯಾಕ್ಸಿ, ಖಾಸಗಿ ವಾಹನ ನಿಲುಗಡೆಗೆ ನಿರ್ದಿಷ್ಟ ಸ್ಥಳ ಕಾದಿರಿಸಿ ವಾಹನ ಚಾಲಕರು, ಪೇಟೆ ವ್ಯಾಪಾರಿಗಳ ಸಹಕಾರದೊಂದಿಗೆ ಪಂಚಾಯತ್ ಟ್ರಾಫಿಕ್ ರೆಗ್ಯೂಲೇಟರಿ ಸಮಿತಿ ನೇತೃತ್ವದಲ್ಲಿ
ನೂತನ ಪರಿಷ್ಕರಣೆಗೆ ಸ್ಥಳ ಪರಿಶೀಲನೆ ನಡೆಯಿತು. ಪಂ.ಸಮಿತಿ, ಬದಿಯಡ್ಕ ಪೋಲಿಸ್ ಠಾಣಾಧಿಕಾರಿ, ಆರ್.ಟಿ.ಓ. ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ನಿಯೋಗದ ಮೂಲಕ ನೂತನ ನಿಯಮ ಪಾಲನೆಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಈ ಹಿಂದೆ ಪೇಟೆ ಪಾರ್ಕಿಂಗ್ ವ್ಯವಸ್ಥೆಗೆ ಪಂಚಾಯತು ಆಡಳಿತ ಮುತುವರ್ಜಿವಹಿಸಿ ಸಮಗ್ರ ನಿಯಮ ಜಾರಿಗೆ ತರಲಾಗಿತ್ತು.ಇದೀಗ ಚೆರ್ಕಳ -ಕಲ್ಲಡ್ಕ ರಸ್ತೆಯ ಜತೆಗೆ ಪೆರ್ಲ ಪೇಟೆ ಅಭಿವೃದ್ಧಿಗೆ ರೂಪುರೇಷೆ ನಡೆಸಲಾಗಿತ್ತು. ಇದರಂತೆ ಕಾಮಗಾರಿಗಳು ಪೂರ್ತಿಗೊಳ್ಳುತ್ತಿದ್ದು ವಾಹನ ನಿಲುಗಡೆಗೂ ನೂತನ ಪರಿಷ್ಕರಣೆ ತರಲಾಗುತ್ತಿದೆ.
ಪೇಟೆಯ ರಸ್ತೆಯ ಇಬ್ಭಾಗದಲ್ಲೂ ಪಾದಚಾರಿ ಹಾಗೂ ವ್ಯಾಪಾರಿಗಳಿಗೆ ತೊಡಕಾಗದ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೊಳಿಸಲಾಗುತ್ತಿದೆ. ಟ್ಯಾಕ್ಸಿ ವಾಹನಗಳಿಗೆ ಪಂಚಾಯತು ವತಿಯಿಂದ ಪ್ರತ್ಯೇಕ ನೊಂದಾವಣೆಗೊಳಿಸಿ ಸುಗಮ ನಿಲುಗಡೆಗೆ ಪಂಚಾಯತ್ ಟ್ರಾಫಿಕ್ ರೆಗ್ಯೂಲೇಟರಿ ಸಮಿತಿಯ ಮೂಲಕ ಯೋಜನೆ ರೂಪಿಸಲಾಗಿದೆ ಎಂದು ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್. ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment