ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಮಹಾಸಭೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆಯಿತು. ಸಮಾರಂಭದಲ್ಲಿ ಅರ್ಥಶಾಸ್ತ್ರ ಒಕ್ಕೂಟದ ವಾರ್ಷಿಕ ಸಂಚಿಕೆ ‘ಅಮಾರ್ತ್ಯ’ ವನ್ನು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಅಂಕಣಕಾರ ಪ್ರೊ. ಜಿ.ವಿ ಜೋಶಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಆರ್ಥಿಕ ಒಳಗೊಳ್ಳುವಿಕೆ ಆರ್ಥಿಕ ಯೋಜನೆಯ ಅಂತಿಮ ಗುರಿಯಾಗಬೇಕು. ಇಲ್ಲವಾದಲ್ಲಿ ಅಶಕ್ತರು, ತುಳಿತಕ್ಕೊಳಗಾದವರು ಮುಖ್ಯವಾಹಿನಿಯಿಂದ ಹೊರಕ್ಕುಳಿಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಯಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯಾ ರೈ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಸ್ನಾತಕೋತ್ತರ ಹಾಗೂ ಸಂಶೋಧನಾ ವಿಭಾಗದ ಪೂರ್ವತನ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ನೂತನ ಶಿಕ್ಷಣ ನೀತಿಯಲ್ಲಿ ಅರ್ಥಶಾಸ್ತ್ರ ವಿಷಯ ಅಧ್ಯಯನಕ್ಕೆ ಸಂಬಂಧಪಟ್ಟ ಸವಾಲುಗಳ ಕುರಿತು ಮಾತನಾಡುತ್ತಾ, ಅರ್ಥಶಾಸ್ತ್ರ ಮಾರುಕಟ್ಟೆ ಸ್ನೇಹಿ ವಿಷಯವಾಗಿ ಮೂಡಿ ಬರಬೇಕು, ಎಂದು ಅಭಿಪ್ರಾಯಪಟ್ಟರು.
ಒಕ್ಕೂಟದ ಅಧ್ಯಕ್ಷ ಡಾ. ರಾಮಕೃಷ್ಣ ಬಿ.ಎಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ. ಸುಧಾಕರ ಪೆರಂಪಳ್ಳಿ ವರದಿ ವಾಚನ ಮಾಡಿದರು. ಖಜಾಂಚಿ ಡಾ ಪ್ರಶಾಂತ ಭಟ್ ಲೆಕ್ಕಪತ್ರ ಮಂಡನೆ ಮಾಡಿದರು. ಸಂಘದ ಜೊತೆ ಕಾರ್ಯದರ್ಶಿ ಪ್ರೊ. ದಯಾ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್ ನೂತನ ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪನ್ಯಾಸಕ ಧೀರಜ್ ಆಚಾರ್ಯ ಉಪಸ್ಥಿತರಿದ್ದು, ಪ್ರೊ. ಡೆಂಜಿಲ್ ಪಿಂಟೋ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق