ಕಲಬುರಗಿ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಮಾಧವ ಗೋಶಾಲೆಯ ಸಹಭಾಗಿತ್ವದಲ್ಲಿ ಇಂದು ಶ್ರೀ ಮಾಧವ ಗೋಶಾಲೆಯಲ್ಲಿ ಮಾತೆಯರಿಗಾಗಿ ಗೋ ಆಧಾರಿತ ಗೃಹೋದ್ಯೋಗದ ಕುರಿತು ಪ್ರಶಿಕ್ಷಣ ನೀಡಲಾಯಿತು. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶ್ರೀಮತಿ ಸುಲೋಚನಾ ಹಾಗೂ ಬೆಳಮಗಿ ಗ್ರಾಮ ಪಂಚಾಯತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ ನಗರ ಹಾಗೂ ಗ್ರಾಮೀಣ ಭಾಗದ ಒಟ್ಟು ಆರು ಜನರಿಗೆ ಹಣತೆ, ಕಪ್ ಸಾಂಬ್ರಾಣಿ ಬತ್ತಿ, ಧೂಪ ಬತ್ತಿ ಹಾಗೂ ಇತರ ಪಂಚಗವ್ಯ ವಸ್ತುಗಳನ್ನು ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಈ ಮೂಲಕ ಶ್ರೀ ಮಾಧವ ಗೋಶಾಲೆ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಅನೇಕರಿಗೆ ಗೃಹೋದ್ಯೋಗ ಒದಗಿಸುತ್ತದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق