ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆಎಸ್ಸಾರ್ಟಿಸಿಯಿಂದ ನಾಲ್ಕು ಹೊಸ ನಗರ ಸಾರಿಗೆ ಬಸ್‌ಗಳ ಆರಂಭ

ಕೆಎಸ್ಸಾರ್ಟಿಸಿಯಿಂದ ನಾಲ್ಕು ಹೊಸ ನಗರ ಸಾರಿಗೆ ಬಸ್‌ಗಳ ಆರಂಭ



ಮಂಗಳೂರು: ಕೆಎಸ್ಸಾರ್ಟಿಸಿ ವತಿಯಿಂದ ನಗರದಲ್ಲಿ ನಾಲ್ಕು ಹೊಸ ಸಿಟಿ ಬಸ್‌ಗಳ ಸೇವೆಯನ್ನು ಇಂದಿನಿಂದ ಆರಂಭಿಸಲಾಗಿದೆ. ನಗರದ ಲ್ಯಾಂಡ್‌ಲಿಂಕ್ಸ್‌ ಬಡಾವಣೆಯಿಂದ ಬಜಾಲ್‌ ಪಡ್ಪು ಮಾರ್ಗದಲ್ಲಿ ಎರಡು ಹಾಗೂ ಬೋಳೂರಿನ ಸುಲ್ತಾನ್‌ ಬತ್ತೇರಿಯಿಂದ ಅಮೃತಾ ವಿದ್ಯಾಲಯದ ಮಾರ್ಗವಾಗಿ ಕಂಕನಾಡಿ ರೈಲು ನಿಲ್ದಾಣಕ್ಕೆ ಎರಡು (ಒಟ್ಟು ನಾಲ್ಕು) ಬಸ್‌ಗಳ ಓಡಾಟವನ್ನು ಇಂದಿನಿಂದ ಆರಂಭಿಸಲಾಗಿದೆ.


ಸುಮಾರು ಐದು ವರ್ಷಗಳ ಹಿಂದೆಯೇ  45 ಸಿಟಿ ಬಸ್‌ಗಳ ಓಡಾಟಕ್ಕೆ ಕೆಎಸ್ಸಾರ್ಟಿಸಿ ಅನುಮತಿ ಪಡೆದುಕೊಂಡಿತ್ತು. ಆದರೆ ಎಲ್ಲ ಮಾರ್ಗಗಳಲ್ಲಿ ಬಸ್‌ಗಳ ಸೇವೆ ಆರಂಭವಾಗಿರಲಿಲ್ಲ. ಮೊದಲ ಹಂತದಲ್ಲಿ 32 ಮಾರ್ಗಗಳಲ್ಲಿ ಕೆಎಸ್ಸಾರ್ಟಿಸಿ ನಗರ ಸಾರಿಗೆ ಆರಂಭವಾಗಿತ್ತು.


ಖಾಸಗಿ ಬಸ್‌ಗಳ ಲಾಬಿಯಿಂದಾಗಿ ಪರವಾನಗಿ ಪಡೆದುಕೊಂಡ ಎಲ್ಲ ಮಾರ್ಗಗಳಲ್ಲೂ ಕೆಎಸ್ಸಾರ್ಟಿಸಿ ಸಿಟಿ ಬಸ್‌ ಓಡಾಟ ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಉಂಟಾದ ಆರ್ಥಿಕ ಹೊಡೆತದಿಂದಾಗಿ ಬಹುತೇಕ ಖಾಸಗಿ ಬಸ್‌ ಉದ್ಯಮ ನೆಲಕಚ್ಚುವಂತಾಗಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕೆಎಸ್ಸಾರ್ಟಿಸಿ ಹೊಸ ನಗರ ಸಾರಿಗೆ ಸೇವೆಗಳನ್ನು ಆರಂಭಿಸಿದೆ.

ಪ್ರಯಾಣಿಕರು ಈ ಬಸ್‌ಗಳ ಸೇವೆಯನ್ನು ಸರಿಯಾಗಿ ಬಳಸಿಕೊಂಡು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ.



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم