ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಸಿಬಿಎಸ್‌ಸಿ ವಿದ್ಯಾಲಯದಲ್ಲಿ ಹಿಂದಿ ದಿವಸ್ ಆಚರಣೆ

ಅಂಬಿಕಾ ಸಿಬಿಎಸ್‌ಸಿ ವಿದ್ಯಾಲಯದಲ್ಲಿ ಹಿಂದಿ ದಿವಸ್ ಆಚರಣೆ

 ಭಾಷೆ ಭಾವನೆಗಳನ್ನು ವ್ಯಕ್ತಪಡಿಸುತ್ತದೆ: ಸರ್ವಮಂಗಳ



ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಹಿಂದಿ ಉಪನ್ಯಾಸಕಿ ಸರ್ವಮಂಗಳ ಮಾತನಾಡುತ್ತಾ ಹಿಂದಿ ಭಾಷೆಯು ಅತ್ಯಂತ ಪುರಾತನವಾದ ಭಾಷೆಯಾಗಿದೆ, ಭಾಷೆಯ ಕಲಿಕೆಯಲ್ಲಿ ಅದರ ವ್ಯಾಕರಣ ಹಾಗೂ ಶಬ್ದಗಳ ಸರಿಯಾದ ಬಳಕೆಯಿಂದ ಭಾಷೆಯ ಶುದ್ಧತೆ ಸಾಧ್ಯ. ಭಾಷೆಯನ್ನು ಕಲಿಯುವುದರಿಂದ ಭಾವನೆಗಳನ್ನು ತಿಳಿಯುವು ದಕ್ಕೆ ಅನುಕೂಲವಾಗುತ್ತದೆ. ಭಾಷೆ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತದೆ ಎನ್ನುತ್ತಾ ಭಾಷೆಯ ಮಹತ್ವವನ್ನು ತಿಳಿಸಿದರು.


ಒಂದೇ ದೇಶ- ಒಂದೇ ಭಾಷೆ ನಮ್ಮದಾಗಲಿ: ಸುಬ್ರಮಣ್ಯ ನಟ್ಟೋಜ 

ಹಿಂದಿ ಭಾಷೆಯು ಹಿಂದೂಸ್ಥಾನದ ಭಾಷೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತದ ರಾಷ್ಟ್ರ ಭಾಷೆಯಾಗಿ ಬರಬೇಕು, ರಾಷ್ಟ್ರ ಭಾಷೆಯು ಎಲ್ಲರಿಗೂ ಬರುವಂತಾಗಬೇಕು. ಭಾಷೆಯ ಉಳಿವು ನಮ್ಮ ಕೈಯ್ಯಲ್ಲಿದೆ ನಮ್ಮ ದೇಶ ನಮ್ಮ ಭಾಷೆ ಎಂಬ ಆತ್ಮಾಭಿಮಾನ ನಮ್ಮಲ್ಲಿ ಬೆಳೆದಾಗ ದೇಶ ಸುಭಿಕ್ಷವಾಗುವುದರಲ್ಲಿ ಎರಡು ಮಾತಿಲ್ಲ. ದೇಶ ನಮಗೆ ಏನು ಕೊಟ್ಟಿದೆ ಎಂಬುದು ಮುಖ್ಯವಲ್ಲ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ.  ನಮ್ಮ ದೇಶದಲ್ಲಿ ಹಲವು ಭಾಷೆಗಳನ್ನಾಡುವ ಜನರಿದ್ದೇವೆ ಆದರೂ ನಾವೆಲ್ಲರೂ ಒಂದೇ ಎಂಬ ಮನೋಭಾವ ನಮ್ಮಲ್ಲಿದೆ. ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಅದರ ಉಳಿವು ಸಾಧ್ಯ ಮುಂದಿನ ದಿನಗಳಲ್ಲಿ ಹಿಂದಿ ಭಾಷೆಯನ್ನು ಉಳಿಸಿ ಬೆಳೆಸೋಣ. ಒಂದೇ ರಾಷ್ಟ ಒಂದೇ ಭಾಷೆ ಎಂಬುದಾಗಿ ನಡೆಯಲಿ ಎಂದು ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದರು.


ವಿದ್ಯಾಲಯದ ಹಿಂದಿ ಶಿಕ್ಷಕಿ ಕುಸುಮ ಹಿಂದಿ ದಿವಸದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಭಟ್, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ಪೋಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪಂಚಮಿ ಪ್ರಾರ್ಥನೆಯನ್ನು ಹಾಡಿ ಶ್ರೇಷ್ಠ ಹಾಗೂ ಆತ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ಶಿಕ್ಷಕಿ ಸುನೀತಾ ಜೆ. ರೈ ವಂದಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ:

ಸಮಾರಂಭದ ಬಳಿಕ ವಿದ್ಯಾರ್ಥಿಗಳಾದ ಮನಿಷಾ ಕಜೆ, ಮಂದಿರಾ ಕಜೆ, ಧ್ರುವ ಇವರು ಹಿಂದಿ ದಿವಸದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿನಿ ಯಶ್ವಿ ಭುಟ್ ಇವಳಿಂದ ದೇಶಭಕ್ತಿ ಗಾಯನಕ್ಕೆ ನೃತ್ಯ ಪ್ರದರ್ಶನ, ವೈಷ್ಣವಿ ಎಂ ಆರ್, ಸನ್ಮಯ್ ಹಾಗೂ ಆದಿಶ್ರೀ ದೇಶಭಕ್ತಿ ಗೀತೆಯನ್ನು ಹಾಡಿದರು. ಆತ್ಮಶ್ರೀ, ಶ್ರೇಷ್ಟ ಆಳ್ವ, ಪ್ರಾಪ್ತಿ ಯವರ ಸಮೂಹ ಗಾನ, ವಿದ್ಯಾರ್ಥಿಗಳಾದ ಶಿವಪ್ರಸಾದ್, ಚಿಂತನ್, ಸ್ವಸ್ತಿಕ್, ಅನೀಶ್ ಹಾಗೂ ತಿಲಕರಾಜ್ ರವರ ಹಿಂದಿ ಪ್ರಹಸನ ನಡೆಯಿತು.

0 Comments

Post a Comment

Post a Comment (0)

Previous Post Next Post